ಮಣಿಪಾಲ: ಶೀಂಬ್ರ ದೇವಸ್ಥಾನದ ಸ್ನಾನಘಟ್ಟ, ನದಿ ದಂಡೆ ಸಂರಕ್ಷಣಾ ಕಾಮಗಾರಿ ಸ್ಥಳಕ್ಕೆ ಉಡುಪಿ ಶಾಸಕರ ಭೇಟಿ, ಪರಿಶೀಲನೆ (Udupi MLA visits, inspects Shimbra Temple bath, river bank site)
ಮಣಿಪಾಲ: ಶೀಂಬ್ರ ದೇವಸ್ಥಾನದ ಸ್ನಾನಘಟ್ಟ, ನದಿ ದಂಡೆ ಸಂರಕ್ಷಣಾ ಕಾಮಗಾರಿ ಸ್ಥಳಕ್ಕೆ ಉಡುಪಿ ಶಾಸಕರ ಭೇಟಿ, ಪರಿಶೀಲನೆ
(Manipala) ಮಣಿಪಾಲ: ಶೀಂಬ್ರ ದೇವಸ್ಥಾನ ಸ್ನಾನಘಟ್ಟ ಹಾಗೂ ನದಿ ದಂಡೆ ಸಂರಕ್ಷಣೆ ಕಾಮಗಾರಿ ಪ್ರದೇಶಕ್ಕೆ ಅಧಿಕಾರಿಗಳೊಡನೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿಗೆ ₹2.25 ಕೋಟಿ ಅನುದಾನ ಮಂಜೂರುಗೊಳಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಜೊತೆ ಸಮಾಲೋಚನೆ ನಡೆಸಿ ಅತೀ ಶೀಘ್ರದಲ್ಲೇ ಕಾಮಗಾರಿಯನ್ನು ಅತ್ಯಂತ ಶೀಘ್ರವಾಗಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಶ್ರೀಮತಿ ಅನಿತಾ, ಹಿರಿಯ ಇಂಜಿನಿಯರ್ ಶರಮೇಶ್ ರಾವ್, ರಾಜೇಂದ್ರ ಮಯ್ಯ, ಸ್ಥಳೀಯ ಮುಖಂಡರಾದ ಪ್ರಶಾಂತ್ ಭಟ್, ಶಂಕರ ಕುಲಾಲ್, ಡೆನೀಸ್ ಪೆರಂಪಳ್ಳಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗ ಉಪಸ್ಥಿತರಿದ್ದರು.