# Tags
#ಅಪರಾಧ

ಮಣೂರು ಬಾಳೆಬೆಟ್ಟು ಚರಂಡಿ ದುರಸ್ತಿಗೆ ಅಡ್ಡಿ : ವ್ಯಕ್ತಿಯೊರ್ವರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಮಣೂರು ಬಾಳೆಬೆಟ್ಟು ಚರಂಡಿ ದುರಸ್ತಿಗೆ ಅಡ್ಡಿ: ವ್ಯಕ್ತಿಯೊರ್ವರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಕೋಟ: ಚರಂಡಿ ದುರಸ್ಥಿ ವೇಳೆ ಕಾಮಗಾರಿ ನಡೆಸಲು ತೊಡಕು ಉಂಟು ಮಾಡಿ, ಸರಕಾರದ ಜಾಗವನ್ನು ಕಬಳಿಸಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿ, ಹಳೆ ಚರಂಡಿಯ ೪೦೦೦ ಶಿಲೆಕಲ್ಲುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಬಾಳೆಬೆಟ್ಟು ನಿವಾಸಿ ವಿರುದ್ಧ  ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಮಣೂರು ಬಾಳೆಬೆಟ್ಟು ಪರಿಸರದಲ್ಲಿ ಭಾನುವಾರ ನಡೆದಿದೆ.

 ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಮ್ಮಕ್ಕು ನೀಡುತ್ತಿರುವ ಕೋಟ ಗ್ರಾಮ ಪಂಚಾಯತ್ ಮಾಜಿ  ಸದಸ್ಯರೊರ್ವರ  ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ,  ಸರಕಾರದ ಜಾಗ  ಪಂಚಾಯತ್ ತಮ್ಮ ವಶಕ್ಕೆ ಕೂಡಲೇ ಪಡೆದುಕೊಳ್ಳುವಂತೆ ಘೋಘಣೆ ಕೂಗಿದರು.

ಪಂಚಾಯತ್ ಮಧ್ಯಪ್ರವೇಶಕ್ಕೆ ಆಗ್ರಹ

ಈ ವಿಚಾರದ ಕುರಿತಂತೆ ಪಂಚಾಯತ್ ಮೃದು ದೋರಣೆ ಸಲ್ಲ. ಬದಲಾಗಿ ಕಠಿಣ ನಿಲುವನ್ನು ತೆಗೆದುಕೊಂಡು ಗ್ರಾಮಸ್ಥರ ಪರಿವಾಗಿ ಕಾರ್ಯನಿರ್ವಹಿಸಲು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಊರಿನ ಹಿರಿಯರಾದ ಹೆರಿಯ ಪೂಜಾರಿ, ಕೋಟಿ ಪೂಜಾರಿ ,ಶಂಕರ ಪೂಜಾರಿ, ಅರುಣಾಚಲ ಮಯ್ಯ, ರಾಜೇಂದ್ರ ಉರಾಳ, ಕೊರ್ಗು ಪೂಜಾರ್ತಿ, ಶೈಲಜಾ ಶೆಟ್ಟಿ, ಗಿರಿಜಾ ಪೂಜಾರ್ತಿ, ಸಾಕು ಪೂಜಾರ್ತಿ, ಚಂದ್ರ ಪೂಜಾರಿ, ಹರೀಶ ಪೂಜಾರಿ, ಪ್ರಸಾದ್ ಬಿಲ್ಲವ, ರತ್ನಾಕರ ಪೂಜಾರಿ, ಪ್ರವೀಣ್ ಶೆಟ್ಟಿ, ಹಾಗೂ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಶಿವರಾಮ ಶೆಟ್ಟಿ ಮತ್ತು ಶಾಂತಾರವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2