# Tags
#Mansoon #PROBLEMS

ಮುಲ್ಕಿ: ಭಾರೀ ಗಾಳಿ ಮಳೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ವಿದ್ಯುತ್‌ ತಂತಿ; ಸವಾರ ಪಾರು (Moolki: A tree, electric wire fell on the bike, rider escaped)

ಮುಲ್ಕಿ: ಭಾರೀ ಗಾಳಿ ಳೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ವಿದ್ಯುತ್‌ ತಂತಿ; ಸವಾರ ಪಾರು

(Moolki)ಮುಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. 

 ಭಾರೀ ಗಾಳಿ ಮಳೆಗೆ ಕುಬೆವೂರು ಶಿಮಂತೂರು ದೇವಸ್ಥಾನ ರಸ್ತೆಯ ಕುಮಾರಮಂಗಿಲ ದೇವಸ್ಥಾನ ರಸ್ತೆ ಕ್ರಾಸ್ ಬಳಿ ಅಕೇಶಿಯಾ ಮರವೊಂದು ಹೈ ಟೆನ್ಶನ್  ವಿದ್ಯುತ್ ತಂತಿ ಮೇಲೆ ಬಿದ್ದು, ಚಲಿಸುತ್ತಿರುವ ಬೈಕ್ ಮೇಲೆ ಬಿದ್ದಿದೆ. ಈ ಸಂದರ್ಭ ಬೈಕ್ ಗೆ ಹಾನಿಯಾಗಿದ್ದು, ಸವಾರ ಹಾಗೂ ಸಹ ಸವಾರ ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ

 ಈ ಭಾಗದಲ್ಲಿ ಕಳೆದ ದಿನಗಳ ಹಿಂದೆ ರಸ್ತೆಗೆ ಮರ ಬಿದ್ದು ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ ಸಂಭವಿಸಿತ್ತು.

ಭಾರೀ ಗಾಳಿ ಮಳೆಗೆ ಕುಬೆವೂರು-ಶಿಮಂತೂರು ದೇವಸ್ಥಾನ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ಕೆಸರುಮಯವಾಗಿ ಸಂಚಾರ ದುಃಸ್ತರವಾಗಿ ಪರಿಣಮಿಸಿದೆ. 

 ಈ ಭಾಗದಲ್ಲಿ ಮೆಸ್ಕಾಂ ಇಲಾಖೆ ಸಿಬ್ಬಂದಿ ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿದು ಚರಂಡಿಯಲ್ಲಿ ಹಾಕಿದ್ದು, ಅದನ್ನು ತೆರವುಗೊಳಿಸದೆ ಕೃತಕ ನೆರೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  ಮುಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಚರಂತಿಪೇಟೆ ಯುವಕ ವೃಂದದ ಕಟ್ಟಡಕ್ಕೆ ಮರದ ಗೆಲ್ಲು ಬಿದ್ದು ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಮುಲ್ಕಿ ನ.ಪಂ. ಸದಸ್ಯ ಹರ್ಷರಾಜ ಶೆಟ್ಟಿ, ಮುಖ್ಯಾಧಿಕಾರಿ ಇಂದು ಎಂ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  ಕಿಲ್ಪಾಡಿ ಗ್ರಾಮದ ರುಕ್ಮಿಣಿ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

Leave a comment

Your email address will not be published. Required fields are marked *