# Tags
#health

ಯೆಯ್ಯಾಡಿಯಲ್ಲಿ ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಕುರಿತು ಜಾಗೃತಿ ಕಾರ್ಯಕ್ರಮ (Awareness program of Cancer and Mental health Welfare in Yeyyadi)

ಯೆಯ್ಯಾಡಿಯಲ್ಲಿ ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಕುರಿತು ಜಾಗೃತಿ ಕಾರ್ಯಕ್ರಮ

(Manglore) ಮಂಗಳೂರು: ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಇದರ ಮಹಿಳಾ ವಿಭಾಗ, ಕೆಎಂಸಿ ಆಸ್ಪತ್ರೆ ಮಂಗಳೂರು, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಮತ್ತು ತಪಸ್ಯಾ ಫೌಂಡೇಶನ್ ಅವರ ಬೆಂಬಲದೊಂದಿಗೆ, ಮಹಿಳಾ ಸ್ತನ ಮತ್ತು ಗರ್ಭಾಶಯದ ಕ್ಯಾನ್ಸ‌ರ್ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಕುರಿತು ಜಾಗೃತಿ ಕಾರ್ಯಕ್ರಮವನ್ನು ಯೆಯ್ಯಡಿಯ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ನಡೆಯಿತು.

 ಮಹಿಳೆಯರಲ್ಲಿ ಆರೋಗ್ಯದ ಮಹತ್ವದ ವಿಷಯಗಳ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಜೀವನ ಕ್ರಮವನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಡಾ. ಲಿನ್ಸೆಲ್, ಕೆಎಂಸಿ ಮಂಗಳೂರು “ಸ್ತನ ಮತ್ತು ಗರ್ಭಾಶಯದ ಕ್ಯಾನ್ಸ‌ರ್ ಮತ್ತು HPV ಲಸಿಕೆ ಜಾಗೃತಿ” ಕುರಿತು ಉಪನ್ಯಾಸ ನಡೆಸಿದರು.

 ಡಾ. ಪೂನಂ ಸಂತೋಷ್ ಕೆಎಂಸಿ ಮಂಗಳೂರು ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯವನ್ನು ಬೆಳೆಸಲು ಅಗತ್ಯವಾದ ತಂತ್ರಗಳನ್ನು ಹಂಚಿಕೊಂಡರು.

 ಈ ಕಾರ್ಯಕ್ರಮವು ಮಹಿಳೆಯರಿಗೆ ಅವರ ಆರೋಗ್ಯದ ಬಗ್ಗೆ ಅಗತ್ಯ ಜ್ಞಾನವನ್ನು ವೃದ್ಧಿಸಲು ಅಮೂಲ್ಯವಾದ ಅವಕಾಶವನ್ನು ಒದಗಿಸಿತು. ಆರೋಗ್ಯವು ಬಲವಾದ ಸಮುದಾಯದ ಮೂಲವಾಗಿದೆ ಎಂದು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ  ವಿಶಾಲ್ ಎಲ್ ಸಾಲಿಯಾನ್ ಅವರು ಅಭಿಪ್ರಾಯಪಟ್ಟರು.

 ಕಾರ್ಯಕ್ರಮದಲ್ಲಿ ತಪಸ್ಯಾ ಫೌಂಡೇಶನ್ ಸ್ಥಾಪಕಿ ಮುಖ್ಯ ನಿಬಂಧಕಿ ಸಬಿತಾ ಆರ್. ಶೆಟ್ಟಿ ಮತ್ತು ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿಯ ಅಧ್ಯಕ್ಷೆ  ನಿರ್ಮಲಾ ಪ್ರಮೋದ್ ಮತ್ತು ಡಿಸಿಐಎಎಮ್ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಶ್ಯಾಮಲಾ ಶಾಸ್ತ್ರಿ ಮತ್ತು  ಕುಸುಮ ದೇವಾಡಿಗ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2