# Tags
#ಧಾರ್ಮಿಕ

ಸಾಸ್ತಾನ: ಸತತ 14 ನೇ ವರ್ಷದ ತಿರುಪತಿ ಪಾದಯಾತ್ರೆ ಪ್ರರಂಭ (Sasthana : 14TH Year Thirupati Padayathra begins)

ಸಾಸ್ತಾನ: ಸತತ 14 ನೇ ವರ್ಷದ ತಿರುಪತಿ ಪಾದಯಾತ್ರೆ ಪ್ರರಂಭ

(Sasthana) ಸಾಸ್ತಾನ: ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲಕರಾದ ಪಿ. ಲಕ್ಷ್ಮೀನಾರಾಯಣ ರಾವ್ ಅವರ ಸಾರಥ್ಯ ದಲ್ಲಿ 14 ನೇ ವರ್ಷದ ತಿರುಪತಿ ಪಾದಯಾತ್ರೆಯು ಶನಿವಾರ ಆಗಸ್ಟ್ 10 ರದಂದು ಆರಂಭಗೊಂಡು 18 ದಿನಗಳಲ್ಲಿ ಈ ಪಾದಯಾತ್ರೆಯು ತಿರುಪತಿ ಕ್ರಮಿಸಲಿದೆ.

ಮೊದಲ ದಿನ  ಸಾಸ್ತಾನದಿಂದ ಹಿರಿಯಡಕ ವೀರಭದ್ರ ದೇವಸ್ಥಾನ ದಲ್ಲಿ ಉಳಿದು, ಹಾಗೆ ಅಲ್ಲಿಂದ ಹೊಸ್ಮಾರು ಲಕ್ಷ್ಮೀ  ವೆಂಕಟರಮಣ ಭಜನಾ ಮಂದಿರ, ಧರ್ಮಸ್ಥಳ ಗಂಗೋತ್ರಿ ಸಭಾಭವನ, ಗುಂಡ್ಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸಕಲೇಶಪುರ ಓಂ ಮಂದಿರ ಸಭಾಭವನ , ಹಾಸನ ಬನಶಂಕರಿ ಕಲ್ಯಾಣ ಮಂಟಪ, ಚೆನ್ನರಾಯಪಟ್ಟಣ ಗಣಪತಿ ಪೆಂಡಾಲ್, ಬೆಳ್ಳೂರು ಕ್ರಾಸ್, ಕುಣಿಗಲ್ ಲಕ್ಷ್ಮೀರಂಗನಾಥ ಸಭಾಭವನ, ಹುಲಿಕುಂಟೆ, ನಂದಿಗ್ರಾಮ ಸಮುದಾಯ ಭವನ, ಕೈವಾರ, ರಾಯಲ್ ಪಾಡು ಶಾಲೆ, ಚಿಂತಪರ್ತಿ ಸಭಾಭವನ, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಕೊನೆಯ ದಿನ ಶ್ರೀನಿವಾಸ ಮಂಗಾಪುರ ದಿಂದ ತಿರುಮಲ ತಲುಪಿ ದೇವರ ದರ್ಶನ ಪಡೆಯುವರು.

ಈ ಪಾದಯಾತ್ರೆ ಯಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. ಪಾದಯಾತ್ರೆ ಮಾಡುವರು, ತಿರುಪತಿ ತಲುಪುವ ತನಕ ಸಂಪೂರ್ಣ ಜವಾಬ್ದಾರಿ ವೆಂಕಟೇಶ್ವರ ಸ್ವೀಟ್ಸ್ ನವರದ್ದೇ ಆಗಿರುತ್ತದೆ.

ಬೆಳಗ್ಗಿನ ಉಪಹಾರ, ಮದ್ಯಾಹ್ನ ಭೋಜನ, ಹಾಗೂ ಸಂಜೆ ಉಪಹಾರ, ರಾತ್ರಿ ಊಟ  ಕುಡಿಯುವ ನೀರಿನ ವ್ಯವಸ್ಥೆ, ಎಲ್ಲವನ್ನೂ ವೆಂಕಟೇಶ್ವರ ಸ್ವೀಟ್ಸ್ ನವರೇ ಆಯೋಜಿಸಿದ್ದಾರೆ.

ಪಾದಯಾತ್ರೆ ಹೋಗುವ ದಾರಿಯಲ್ಲಿ ಪಾದಯಾತ್ರಿಗಳು  ಶ್ರಮ ಸೇವೆ ಮಾಡುತ್ತಾ ಸಾಗುತ್ತಾರೆ. ಸೇವ್ ಬ್ಲಡ್ ರಕ್ತದಾನದ ಬಗ್ಗೆ ಅರಿವು, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದು, ಭಿಕ್ಷುಕರಿಗೆ ಆಹಾರ ನೀಡುವುದು, ಬಸ್ ಸ್ಟಾಂಡ್ ಸ್ವಚ್ಛತೆ, ವಯಸ್ಸಾದವರಿಗೆ  ಕೆಲಸದ ಸಹಾಯ ಮಾಡುತ್ತಾ ಸಾಗುತ್ತಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2