ಸೋಮವಾರ(ಅ.5)ದಿಂದ ಪ್ರವಾಸಿಗರಿಗೆ ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚಿನ ವೀಕ್ಷಣೆಗೆ ಅವಕಾಶ (Tourist will be allowed to visit the Padubidri Blue Flag beach from Monday)
ಸೋಮವಾರ (ಅ. 5)ದಿಂದ ಪ್ರವಾಸಿಗರಿಗೆ ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚಿನ ವೀಕ್ಷಣೆಗೆ ಅವಕಾಶ
(Padubidri) ಪಡುಬಿದ್ರಿ: ಕಡಲ ಕೊರತದಿಂದಾಗಿ ರಸ್ತೆಯ ಸಂಪರ್ಕವನ್ನು ಕಳೆದುಕೊಂಡಿದ್ದ ಅಂತರ್ ರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್ ವೀಕ್ಷಣೆಗೆ ಸೋಮವಾರ ಅಗಸ್ಟ್ 5 ರಿಂದ ಅವಕಾಶ ಕಲ್ಪಿಸಲಾಗುವುದು ಎಂದು ಬೀಚ್ ಪ್ರಬಂಧಕ ವಿಜಯ ಶೆಟ್ಟಿ ಹೇಳಿದ್ದಾರೆ.
ಕಡಲ ಕೊರತದಿಂದಾಗಿ ರಸ್ತೆಯ ಸಂಪರ್ಕ ಕಳೆದುಕೊಂಡಿದ್ದ ಅಂತರ್ ರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್ ಮಾರ್ಗವನ್ನು ತುರ್ತು ದುರಸ್ತಿ ಪಡಿಸಲು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯರವರು ಆದೇಶಿಸಿದ್ದು, ಕೇವಲ 05 ದಿನದ ಅವಧಿಯಲ್ಲಿ ರಸ್ತೆ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ.
ಸೋಮವಾರ (ಅಗಸ್ಟ್ 5) ರಿಂದ ಪ್ರವಾಸಿಗರಿಗೆ ಬ್ಲೂ ಫ್ಲಾಗ್ ಬೀಚಿನ ವೀಕ್ಷಣೆಗೆ ಅವಕಾಶ ನೀಡಲಾಗುವುದು.
ಅತ್ಯಂತ ಕಡಿಮೆ ಅವಧಿಯಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಶಾಸಕರು, ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಆಗ್ರಹಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿ, ಕಡಲ ಕೊರೆತದ ತೀವ್ರತೆಯನ್ನು ಅತ್ಯಂತ ಸಮರ್ಪಕವಾಗಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಿಸಿ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ರಸ್ತೆಯ ರಿಪೇರಿ ಕಾರ್ಯವು ಪೂರ್ಣಗೊಳಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ ಎಲ್ಲ ಮಾಧ್ಯಮ ಮಿತ್ರರಿಗೂ ಬ್ಲೂ ಫ್ಲಾಗ್ ಬೀಚ್ ಸಿಬ್ಬಂದಿ ವರ್ಗದ ಪರವಾಗಿ ವಿಜಯ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಬ್ಲೂ ಫ್ಲಾಗ್ ಬೀಚಿನ ಇಷ್ಟು ಜನಪ್ರಿಯತೆಗೆ ಪಡುಬಿದ್ರಿಯ ಸ್ಥಳೀಯ ಮಾಧ್ಯಮ ಮಿತ್ರರ ಸಹಕಾರವೇ ಮಹತ್ತರ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿಯೂ ತಮ್ಮೆಲ್ಲರಿಂದಲೂ ಇದೇ ರೀತಿಯ ಸಹಕಾರವನ್ನು ಬಯಸುತ್ತಿದ್ದೇವೆ ಎಂದು ವಿಜಯ್ ಹೇಳಿದ್ದಾರೆ