# Tags
#fastival

ಹೆಜಮಾಡಿ: ದುರ್ಗಾ ಫ್ರೆಂಡ್ಸ್, ಅಟೋ ರಿಕ್ಷಾ ಯೂನಿಯನ್, ಖಡ್ಗೇಶ್ವರಿ ಭಜನ ಮಂದಿರದ  ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ

ಹೆಜಮಾಡಿ: ದುರ್ಗಾ ಫ್ರೆಂಡ್ಸ್, ಅಟೋ ರಿಕ್ಷಾ ಯೂನಿಯನ್, ಖಡ್ಗೇಶ್ವರಿ ಭಜನ ಮಂದಿರದ  ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ

(Hejamdi) ಹೆಜಮಾಡಿ: ದುರ್ಗಾ ಫ್ರೆಂಡ್ಸ್, ಅಟೋ ರಿಕ್ಷಾ ಯೂನಿಯನ್(ರಿ) ಮತ್ತು ಖಡ್ಗೇಶ್ವರಿ ಭಜನ ಮಂದಿರದ ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ ಗುರುವಾರ ನೆರವೇರಿತು.

ವಾಯುಪಡೆ ಸೇನೆಯ ನಿವೃತ್ತ  ಕಾರ್ಪೋರಲ್   ಪುರುಷೋತ್ತಮ್ ಗುರಿಕಾರ  ಹೆಜಮಾಡಿ ಮಾತನಾಡಿ,  ನಾನು ಭಾರತೀಯ ಎಂಬ ಹೆಮ್ಮೆಯ ಭಾವನೆ ಬೆಳಸಿಕೂಳ್ಳುವುದರೊಂದಿಗೆ ದೇಶ ರಕ್ಷಣೆಯ ಕರ್ತವ್ಯ ವನ್ನು ಪ್ರತಿಯೊಬ್ಬರೂ ಹೊತ್ತು ಕೊಳ್ಳಬೇಕು. ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ‌ಯುವಕರ ಪಾತ್ರ ಬಹಳ ಮುಖ್ಯ. ಏಕೆಂದರೆ ಯಾವುದೇ ರಾಷ್ಟ್ರದ ಅಭಿವೃದ್ಧಿ ಭವಿಷ್ಯದ ಪೀಳಿಗೆಯಲ್ಲಿದೆ. ಯುವಕರಿಗೆ ಜಗತ್ತನ್ನು ಬದಲಿಸುವ ಶಕ್ತಿ ಇದೆ. ನಾವೆಲ್ಲರೂ ದೇಶದ ಸತ್ಪ್ರಜೆಯಾಗಿ ಬಾಳ ಬೇಕು ಎಂದರು.

ಈ ಸಂದರ್ಭದಲ್ಲಿ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಅನಿಲ್  ಕುಂದರ್, ಮಾಜಿ ಅಧ್ಯಕ್ಷ  ಪ್ರಭಾಕರ್ ಕರ್ಕೇರ, ಸಂಚಾಲಕರಾದ ಎಚ್. ರವಿ ಕುಂದರ್, ಗೌರವ ಸಲಹೆಗಾರ ದೇವದಾಸ್ ಸಾಲ್ಯಾನ್ , ಉಪಾಧ್ಯಕ್ಷ ಹೀತೇಶ್  ಮೆಂಡನ್, ಕಾರ್ಯದರ್ಶಿ ಕೀರ್ತನ್ ಸಾಲ್ಯಾನ್ ,  ಗ್ರಾ.ಪಂ.ಸದಸ್ಯೆ ನಿರ್ಮಲಾ ಕೆ.  ಖಡ್ಗೇಶ್ವರಿ ಭಜನ ಮಂದಿರ ಅಧ್ಯಕ್ಷ  ಗಣೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಕೃಷ್ಣ ‌ಪೂಜಾರಿ , ಹೆಜಮಾಡಿ ‌ದೇವಾಡಿಗರ ಸಂಘ ಅಧ್ಯಕ್ಷ ಹರೀಶ್ ದೇವಾಡಿಗ , ಪಡುಬಿದ್ರಿ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಉಪಸ್ಥಿತರಿದ್ದರು..

    ರವಿ ಎಚ್ ಕುಂದರ್ ಸ್ವಾಗತಿಸಿದರು. ಕೀರ್ತನ್ ಸಾಲ್ಯಾನ್  ನಿರೂಪಿಸಿ,  ವಂದಿಸಿದರು.

ಹೆಜಮಾಡಿ ಅಟೋ ರಿಕ್ಷಾ ಯೂನಿಯನ್( ರಿ) ವತಿಯಿಂದ 78 ನೇ ಸ್ವಾತಂತ್ರೋತ್ಸವನ್ನು ಹೆಜಮಾಡಿ ಮುಖ್ಯ ಪೇಟೆಯಲ್ಲಿ ಯೂನಿಯನ್ ಧ್ವಜಸ್ತಂಭ ವೃತ್ತದಲ್ಲಿ ಆಚರಿಸಲಾಯಿತು.

 ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶೇಖರ್ ಹೆಜ್ಮಾಡಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವ‌ ಮಹತ್ವದ ಬಗ್ಗೆ ಮಾತನಾಡಿದರು.

    ಈ ಸಂದರ್ಭದಲ್ಲಿ  ಯೂನಿಯನ್ ಪದಾಧಿಕಾರಿಗಳು, ಸದಸ್ಯರು ಹಾಗು ಸಾರ್ವಜನಿಕರು ಭಾಗವಹಿಸಿದರು

  ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2