08ಜುಲೈ, ಬಿ.ಸಿ.ರೋಡ್ ಸಮೀಪದ ಪಾಣೆ ಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ರಾಜ್ಯ ಮಟ್ಟದ ಸಖಾಫಿ ಸಂಗಮ (July 8, State Sakhafi Sangama at Pane Mangaluru Sagar Auditorium)
೦8 ಜುಲೈ, ಬಿ.ಸಿ.ರೋಡ್ ಸಮೀಪದ ಪಾಣೆ ಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ರಾಜ್ಯ ಮಟ್ಟದ ಸಖಾಫಿ ಸಂಗಮ
(Mangaluru) ಮಂಗಳೂರು, ಜು. 7: ಕೇರಳದ ಕಲ್ಲಿಕೋಟೆ ಜಾಮಿಅ ಮರ್ಕಝ್ ಸಂಸ್ಥೆಯಿಂದ ಸಖಾಫಿ ಬಿರುದು ಪಡೆದ ಸಖಾಫಿ ವಿದ್ವಾಂಸರ ಸಂಗಮವು ಸೋಮವಾರ ಜು.8ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಮರ್ಕಝ್ ಪ್ರಧಾನ ಕಾರ್ಯದರ್ಶಿ ಇಂಡಿಯನ್ ಗ್ರಾಂಡ್ ಮುಫಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝನುಲ್ ಉಲಮಾ ಖಾಝಿ ಮಾಣಿ ಉಸ್ತಾದ್, ಮರ್ಕಝ್ ಪ್ರೊಫೆಸರ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ ವಿಶೇಷ ಅತಿಥಿಯಾಗಿ ಭಾಗವಹಿಸುವರು.
ಉಡುಪಿ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷ ಮುಹಮ್ಮದ್ ಸಖಾಫಿ, ಕಾರ್ಯದರ್ಶಿ ತಾಜುದ್ದೀನ್ ಸಖಾಫಿ ನಾವುಂದ ಸಭೆಯಲ್ಲಿ ಉಪಸ್ಢಿತರಿರುವರು.
ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಅಧ್ಯಕ್ಷ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಟರ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾರಂದೂರ್ ಮರ್ಕಝ್ ಸಖಾಫತಿ ಸುನ್ನಿಯ್ಯ ಸಮಿತಿ ಸದಸ್ಯ ಡಾ. ಎಮ್ಮೆಸ್ಸೆಂ ಅಬ್ದುರಶೀದ್ ಸಖಾಫಿ ಝನಿ, ಮರ್ಕಝ್ ಮುದರ್ರಿಸ್ ಹಾಫಿಳ್ ಕೌಸರ್ ಸಖಾಫಿ, ಅಶ್‌ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ವಿಷಯ ಮಂಡಿಸುವರು ಎಂದು ಪ್ರಕಟಣೆ ತಿಳಿಸಿದೆ.