# Tags
#ಶಾಲಾ ಕಾಲೇಜು

(Moodabidrri) ಮೂಡಬಿದ್ರಿ ಆಳ್ವಾಸ್ ಕಾಲೇಜಿನಲ್ಲಿ (Alavas college)ಸಾಫ್ಟ್ ಸ್ಕಿಲ್ಸ್ ಕುರಿತ ಕಾರ್ಯಾಗಾರ

 (Moodabidri) ಮೂಡಬಿದ್ರಿ ಆಳ್ವಾಸ್ ಕಾಲೇಜಿನಲ್ಲಿ (Alavas College)ಸಾಫ್ಟ್ ಸ್ಕಿಲ್ಸ್ ಕುರಿತ ಕಾರ್ಯಾಗಾರ

(Moodabidŗi) ವಿದ್ಯಾಗಿರಿ: ‘ಮಾತು ಸಕಾರಾತ್ಮಕ ಆಗಿರಲಿ’ ಎಂದು ‘ಸ್ಮೈಲ್ ಮೇಕರ್ ಕಾರ್ಪೊರೇಟ್ ನಮ್ಯ ಕೌಶಲಗಳ ತರಬೇತುದಾರರಾದ ಶೋಭಾ ಜಿ. ರಾವ್ (Shobha G Rao) ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ವಿಭಾಗವು ಗುರುವಾರ ಹಮ್ಮಿಕೊಂಡ  ಪದಗಳ ಶಕ್ತಿ́  ಸ್ಕಿಲ್ಸ್ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಾವು ಬಳಸುವ ಪದಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಒಂದು ಪದವು ನಮ್ಮ ವ್ಯಕ್ತಿತ್ವವನ್ನು ವೃದ್ಧಿಸಬಹುದು ಅಥವಾ ಕೆಡಿಸಬಹುದು. ಮಾತನಾಡುವಾಗ ಪದಪ್ರಯೋಗ ಹಾಗೂ ಧ್ವನಿ ಬಗ್ಗೆ ಎಚ್ಚರ ಇರಲಿ ಎಂದರು. 

ವಿದ್ಯಾರ್ಥಿಗಳಲ್ಲಿ ತಮ್ಮಲ್ಲಿರುವ ಸಾಮಾರ್ಥ್ಯವನ್ನು ಗುರುತಿಸಲು ಹೇಳಿದ ಅವರು,  ಸಂವಹನ ಸಂಬಂದಿತ ಚಟುವಟಿಕೆಗಳನ್ನು ನಡೆಸಿದರು.

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬಳಕೆಯ ಪದಗಳ ಮೇಲೆ ನಮ್ಮ ಕೌಶಲವು ಮೃದು ಅಥವಾ ಕಠಿಣವೇ ಎಂಬುದನ್ನು ಅಂದಾಜಿಸಲಾಗುತ್ತದೆ. ಜ್ಞಾನವು ಶಕ್ತಿಯಾಗಿದ್ದು, ಸದ್ವಿನಿಯೋಗಿಸಬೇಕು ಎಂದರು.

ಕಾರ‍್ಯಗಾರದಲ್ಲಿ  ಶ್ರೀ ಧವಲಾ ಕಾಲೇಜು (Dhavala College), ಶ್ರೀ ಮಹಾವೀರ ಕಾಲೇಜು (Mahaveera Collge)  ಹಾಗೂ ಆಳ್ವಾಸ್‌ನ (Alvas College) ಬಿಬಿಎ ಹಾಗೂ ಬಿಎಚ್‌ಆರ್‌ಡಿ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ 63 ವಿದ್ಯಾರ್ಥಿಗಳು ಪಾಲ್ಗೊಂಡರು.

ಸ್ನಾತಕೋತ್ತರ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಶಾಜಿಯಾ ಕಾನೂಮ್, ಸಹಪ್ರಾಧ್ಯಾಪಕಿ ಹಾಗೂ ಕಾರ‍್ಯಕ್ರಮ ಸಂಯೋಜಕಿ ರಾಜಶ್ರೀ ರಾವ್ ಇದ್ದರು.   ವಿದ್ಯಾರ್ಥಿನಿ ವಿದ್ಯಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ರಫಿಯಾ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2