ಮಲ್ಪೆ ಸಮುದ್ರ ತೀರದಲ್ಲಿ ಇಬ್ಬರು ಹುಡುಗಿಯರು ನೀರುಪಾಲು : ಒಬ್ಬಾಕೆ ಮೃತ್ಯು : ಮತ್ತೋರ್ವಳ ರಕ್ಷಣೆ.
ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಲ್ಪೆ ಸಮುದ್ರ ತೀರದಲ್ಲಿ ನೀರುಪಾಲಾಗಿದ್ದು, ಅವರಲ್ಲಿ ಒಬ್ಬಾಕೆ ಮೃತಪಟ್ಟು ಇನ್ನೊಬ್ಬಾಕೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲುಗೊಂಡಿರುವ ಘಟನೆ ಘಟಿಸಿದೆ. ಮಡಿಕೇರಿಯ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಮಾನ್ಯ ಮತ್ತು ಯಶಸ್ವಿನಿ ಎಂಬಿಬ್ಬರು ವಿದ್ಯಾರ್ಥಿನಿಯರು ಕಳೆದ ಮೂರು ದಿನಗಳ ಹಿಂದೆ ಇದ್ದಕ್ಕಿದಂತೆ ನಾಪತ್ತೆಯಾಗಿದ್ದರು. ಇತ್ತಕಡೆ ಶನಿವಾರ ಮಧ್ಯರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಮುಳುಗುತಜ್ಞ ಈಶ್ವರ್ ಮಲ್ಪೆ ಘಟನಾ ಸ್ಥಳಕ್ಕಾಗಮಿಸಿ […]