ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ, ಹೊರೆಕಾಣಿಕೆ (Punar Pratistha Brahmakalotsava of Karandadi Sri Vishnumurthy Brahmalingeshwar Temple, Horekanike)
ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ, ಹೊರೆಕಾಣಿಕೆ
(Kaup) ಕಾಪು; ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶಿಲಾಮಯ ಆಲಯ ಸಮರ್ಪಣೆ, ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ ಕಾರ್ಯಕ್ರಮ ಜ.30ರಿಂದ ಫೆ.9ರವರೆಗೆ ಜರುಗಲಿದ್ದು, ಈ ಪ್ರಯುಕ್ತ ಶನಿವಾರ ಸಂಜೆ ಹಸಿರು ವಾಣಿ ಹೊರೆಕಾಣಿಕೆ ಮತ್ತು ಶೋಭಾಯಾತ್ರೆ ನಡೆಯಿತು.
ಮಜೂರು ಲೀಲಾಧರ ಶೆಟ್ಟಿ ಸರ್ಕಲ್ ನಿಂದ ಶ್ರೀ ಕ್ಷೇತ್ರದವರೆಗೆ ವೈಭವದ ಮೆರವಣಿಗೆಯಲ್ಲಿ ನಾನಾ ಸಾಂಸ್ಕೃತಿಕ ಕಲಾತಂಡಗಳು, ಭಜನಾ ತಂಡಗಳು ಮತ್ತು ವಾದ್ಯಘೋಷ ಸಾಗಿಬಂತು.
ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶಿಲಾಮಯ ಆಲಯ ಸಮರ್ಪಣೆ ಫೆ.3ರಂದು ಹಾಗೂ ಫೆ.6ರಂದು ಬ್ರಹ್ಮಕಲಶಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ಜರಗಲಿದೆ.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಧಾನ ತಂತ್ರಿ ವೇದಮೂರ್ತಿ ಕಳತ್ತೂರು ಉದಯ ತಂತ್ರಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ, ಆಡಳಿತ ಮೊಕ್ತಸರ ಸತ್ಯಜಿತ್ ಶೆಟ್ಟಿ ಕರಂದಾಡಿಗುತ್ತು, ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ, ಕರಂದಾಡಿಗುತ್ತು, ಕೋಶಾಧಿಕಾರಿ ಕೆ. ಪದ್ಮನಾಭ ಶಾನುಭಾಗ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್, ಗೌರವಾಧ್ಯಕ್ಷರಾದ ವಿಠಲ ಶೆಟ್ಟಿ ನಡುಬರ್ಪಾಣಿ, ಮೋಹನ್ ಶೆಟ್ಟಿ ಬರ್ಪಾಣಿ, ಪ್ರೇಮನಾಥ ಶೆಟ್ಟಿ ಕರಂದಾಡಿ ಗುಡ್ಡಶೆಟ್ರಮನೆ, ಪ್ರಮುಖರಾದ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಕೆ.ವಾಸು ದೇವ ರಾವ್, ಉಮೇಶ್ ಶೆಟ್ಟಿ, ಪಡುಬರ್ಪಾಣಿ, ಶ್ರೀಧರ್ ಶೆಟ್ಟಿಗಾರ್, ಡಾ.ಪ್ರಜ್ಞಾ ಮಾರ್ಪಳ್ಳಿ, ದಿನೇಶ್ ಶೆಟ್ಟಿ, ಶರತ್ ಶೆಟ್ಟಿಗಾರ್, ನಿರಂಜನ್ ಶೆಟ್ಟಿ ಪ್ರಕಾಶ್ ಶೆಟ್ಟಿ ಶ್ಯಾಮ ಶೆಟ್ಟಿಗಾರ, ರವಿ ನಾಯ್ಕ ಮುದ್ದು ಪೂಜಾರಿ, ಭಾಸ್ಕರ ಕುಮಾರ್, ಶರ್ಮಿಳಾ ಆಚಾರ್ಯ, ಕೃಷ್ಣ ರಾವ್, ಸತೀಶ್ ಶೆಟ್ಟಿ, ನಿರ್ಮಲ್ ಕುಮಾರ್ ಹೆಗ್ಡೆ, ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ರತ್ನಾಕರ ಶೆಟ್ಟಿ ಕರಂದಾಡಿ, ರಾಮಚಂದ್ರ ಆಚಾರ್ಯ, ಲಕ್ಷ್ಮೀಶ ಭಟ್, ರವೀಂದ್ರ ಮಲ್ಲಾರ್, ಜಯ ಗೌಡ ಮಲ್ಲಾರ್, ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.