# Tags
#PROBLEMS #ಸಂಘ, ಸಂಸ್ಥೆಗಳು

 ಕಾಪು ಪುರಸಭಾ ಮಾಸಿಕ ಸಭೆ : ಹೆದ್ದಾರಿ ಸಮಸ್ಯೆ ಬಗೆಹರಿಸಲು ಪ್ರಾಧಿಕಾರದ ನಿರಾಸಕ್ತಿಗೆ ಆಕ್ಷೇಪ (Kaup Municipality Monthly Meeting: Objection to the Authority’s Apathy in Solving the Highway Problem)

ಕಾಪು ಪುರಸಭಾ ಮಾಸಿಕ ಸಭೆ : ಹೆದ್ದಾರಿ ಸಮಸ್ಯೆ ಬಗೆಹರಿಸಲು ಪ್ರಾಧಿಕಾರದ ನಿರಾಸಕ್ತಿಗೆ ಆಕ್ಷೇಪ

  (Kaup) ಕಾಪು : ಕಾಪು ಪುರಸಭಾ ವ್ಯಾಪ್ತಿಯ ಮೂಳೂರಿನಿಂದ ಪಾಂಗಾಳದವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ನಾಲ್ಕು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರೂ, ಸಮಸ್ಯೆ ಬಗೆಹರಿದಿಲ್ಲ. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರರು ಒಮ್ಮೆಯೂ ಪುರಸಭೆಗೆ ಬಂದಿಲ್ಲ. ಹೆದ್ದಾರಿ ಇಲಾಖೆಯು ಪುರಸಭೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವ ಹೆದ್ದಾರಿ ಇಲಾಖೆ, ಗುತ್ತಿಗೆದಾರರ ವಿರುದ್ಧ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ಹೊರ ಹಾಕಿದರು.

 ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಅರುಣ್ ಶೆಟ್ಟಿ, ಕಿರಣ್  ಆಳ್ವ ಸುರೇಶ್ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಹೆದ್ದಾರಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

 ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಟೋಲ್ ಸುರಕ್ಷಾ ಅಧಿಕಾರಿ ಶೈಲೇಶ್ ಶೆಟ್ಟಿ ಉತ್ತರಿಸಲು ಮುಂದಾದರು. ಆಗ ನಮ್ಮ ಸಮಸ್ಯೆ ಬಗ್ಗೆ ನಿಮ್ಮ ಜತೆ ಮಾತನಾಡಿ ಪ್ರಯೋಜನವಿಲ್ಲ ನಿಮ್ಮಮೇಲಾಧಿಕಾರಿಗಳು ಬಂದು ಉತ್ತರಿಸಲಿ ಎಂದು ಸದಸ್ಯರು ಆಗ್ರಹಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಧ್ಯ ಪ್ರವೇಶಿಸಿ, ಸಮಸ್ಯೆ ಗಂಭೀರವಾಗಿದೆ. ಇದರ ಬಗ್ಗೆ ಚರ್ಚಿಸಲು, ಅಹವಾಲು ಸ್ಥಾನದಲ್ಲಿರುವ ಪುರಸಭೆಯನ್ನು ಪಡೆಯಲು ಅಧಿಕಾರಿಗಳು ಜವಾಬ್ದಾರಿಯುತ ಬರಬೇಕಿದೆ. ನಿರ್ಲಕ್ಷಿಸುವುದು ಬೇಡ. ಸಭೆ ತಪ್ಪಿಸುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು. ಸಮಸ್ಯೆಗಳ ಪಟ್ಟಿ ನೀಡುವಂತೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗೆ ಸೂಚಿಸಿದರು.

ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ನಾಗರಾಜ್ ಸಿ. ಉಪಸ್ಥಿತರಿದ್ದರು.

 ಬ್ಯಾನರ್ ತೆರವಿಗೆ ಆಗ್ರಹ : ಪುರಸಭೆ ವ್ಯಾಪ್ತಿಯ ನಿಷೇಧಿತ ವಲಯ ಮತ್ತು ಅಪಘಾತ ವಲಯಗಳಲ್ಲಿ ಹಾಕಿರುವ ಬ್ಯಾನ‌ರ್ ಗಳನ್ನು ತೆರವುಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. ಮುಖ್ಯಾಧಿಕಾರಿ ನಾಗರಾಜ್ ಅವರು ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಸದಸ್ಯರ ಸಹಕಾರ ಬೇಕು. ನಿಷೇಧಿತ ವಲಯದಲ್ಲಿ ಬ್ಯಾನರ್ ಅಳವಡಿಸ ದಿರುವಂತೆ ರಾಜಕೀಯ ಮುಖಂಡರನ್ನು ಸದಸ್ಯರು ಮನವೊಲಿಸ ಬೇಕು ಎಂದರು. ಸದಸ್ಯರೆಲ್ಲರ ಒಮ್ಮತದಂತೆ ಬ್ಯಾನ‌ರ್ ಗಳನ್ನು ಹತ್ತು ದಿನಗಳ ಒಳಗಾಗಿ ತೆರವುಗೊಳಿಸಲು ನಿರ್ಧರಿಸಲಾಯಿತು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2