# Tags
#ಅಪಘಾತ #ರಾಜಕೀಯ

ಕಾರ್ಕಳ: ಕಟ್ಟಡಕ್ಕೆ ಆಕಸ್ಮಿಕ ಬೆಂಕಿ- ತಪ್ಪಿದ ಭಾರಿ ಅನಾಹುತ Karkala: Accidental fire to the building- a major disaster that was missed

ಕಾರ್ಕಳ: ಕಟ್ಟಡಕ್ಕೆ ಆಕಸ್ಮಿಕ ಬೆಂಕಿ- ತಪ್ಪಿದ ಭಾರಿ ಅನಾಹುತ

(Karkala) ಕಾರ್ಕಳ: ಇಲ್ಲಿಯ ಆನೆಕೆರೆ ಪರಿಸರದ ಕಟ್ಟಡವೊಂದರಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಇಡೀ ಕಟ್ಟಡವನ್ನೇ ಆವರಿಸಿಕೊಂಡಿದೆ. ಕೂಡಲೇ ದೌಡಾಯಿಸಿದ ಅಗ್ನಿಶಾಮಕದಳದವರು ನಡೆಸಿದ ಕಾರ್ಯಚರಣೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.

ಮಿಯ್ಯಾರುವಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವದ ಪ್ರಮುಖ ರೂವಾರಿ, ಉದ್ಯಮಿ ಗಣಪತಿ ಹೆಗ್ಡೆಯವರ ಮಾಲೀಕತ್ವದ ಕಟ್ಟಡದಲ್ಲಿ ಸದಾ ನಾಮಾಂಕಿತದ ಕುಶನ್ ವರ್ಕ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.

ಕಾರ್ಕಳ ಅಗ್ನಿಶಾಮಕದಳದವರು ತಕ್ಷಣ ಆಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿರುವುದರಿಂದ ಪರಿಸರದ ಹಲವು ವ್ಯಾಪಾರ ಮಳಿಗೆಗಳಿಗೆ ತಗಲುತ್ತಿದ್ದ ಬೆಂಕಿಯ ಜ್ವಾಲೆ ಹತೋಟಿಗೆ ಬಂದಿದೆ ಎನ್ನಲಾಗಿದೆ.

 

 

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2