ಪತ್ರಕರ್ತ ರವಿ ಬಿ ಅಂಚನ್ ರವರ ತಾಯಿ ಶ್ರೀಮತಿ ಲಲಿತ ಬಿ. ಅಂಚನ್ ನಿಧನ (Journalist Ravi B. Anchan’s mother Mrs. Lalitha B. Anchan passes away)
ಪತ್ರಕರ್ತ ರವಿ ಬಿ ಅಂಚನ್ ರವರ ತಾಯಿ ಶ್ರೀಮತಿ ಲಲಿತ ಬಿ. ಅಂಚನ್ ನಿಧನ
(Mumbai) ಮುಂಬಯಿ: ಮುಂಬಯಿಯ ಪತ್ರಕರ್ತ, ಕರ್ನಾಟಕ ಮಲ್ಲ ದಿನಪತ್ರಿಕೆಯ ವರದಿಗಾರ ರವಿ ಬಿ ಅಂಚನ್ ಅವರ ತಾಯಿ ಶ್ರೀಮತಿ ಲಲಿತ ಬಿ. ಅಂಚನ್ ರವರು (84) ವಯೋ ಸಹಜ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು.
ಮೃತರ ಅಂತ್ಯಕ್ರಿಯೆ ಗುರುವಾರ ಡೊಂಬಿವಲಿಯಲ್ಲಿ ನೂರಾರು ಅಭಿಮಾನಿಗಳ ಸಮ್ಮುಖ ನೆರವೇರಿತು.
ಮೃತರು ಮೂಲತ ಪಡುಬಿದ್ರಿ ಕಲ್ಲಟ್ಟೆ ಕಾಡಿಪಟ್ಣ ನಿವಾಸಿಯಾಗಿದ್ದು ಪುತ್ರ ರವಿ ಬಿ. ಅಂಚನ್, ಒರ್ವ ಪುತ್ರಿ, ಒರ್ವ ಸಹೋದರಿ, ಮೊಮ್ಮಕ್ಕಳ ಸಹಿತ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.