# Tags
#PROBLEMS

ಪಡುಪಣಂಬೂರು ನಂದಿನಿ ನದಿಯಿಂದ ಅಕ್ರಮ ಮರಳು ಸಾಗಾಟ; ಹದಗೆಟ್ಟ ರಸ್ತೆ, ಪ್ರತಿಭಟನೆಗೆ ಸಿದ್ಧತೆ (Illegal sand transportation from Nandini River in Padupanambur; Road in a state of disrepair, preparations for protest)

  ಪಡುಪಣಂಬೂರು ನಂದಿನಿ ನದಿಯಿಂದ ಅಕ್ರಮ ಮರಳು ಸಾಗಾಟ; ಹದಗೆಟ್ಟ ರಸ್ತೆ, ಪ್ರತಿಭಟನೆಗೆ ಸಿದ್ಧತೆ

(Mulki) ಮುಲ್ಕಿ: ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ರಸ್ತೆ ಅಕ್ರಮ ಮರಳುಗಾರಿಕೆಯಿಂದ ಸಂಪೂರ್ಣ ನಾಶವಾಗಿದ್ದು, ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ಮೀನುಗಾರಿಕಾ ರಸ್ತೆ ನಂದಿನಿ ನದಿಯ ತಟದಲ್ಲಿದೆ. ಮೂರು ಕಡೆ ಅಕ್ರಮ ಮರಳು ಗಾರಿಕೆಯ ದಕ್ಕೆಗಳನ್ನು ನಿರ್ಮಿಸಲಾಗಿದ್ದು,  ರಾತ್ರಿ ಹೊತ್ತು ಟಿಪ್ಪರ್ ಮೂಲಕ ಎಗ್ಗಿಲ್ಲದೆ ಮರಳು ಸಾಗಾಟ ನಡೆಯುತ್ತಿದೆ.

ಅಕ್ರಮ ಮರಳುಗಾರಿಕೆಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ಅಭಯ ಚಂದ್ರ ಜೈನ್ ಅವಧಿಯಲ್ಲಿ ಸಂಪೂರ್ಣ ಡಾಮರೀಕರಣಗೊಂಡಿದ್ದ ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ರಸ್ತೆಯ ಅಸ್ಥಿಪಂಜರ ಕಾಣಿಸುತ್ತಿದ್ದು, ಅಕ್ರಮ ಮರಳುಗಾರಿಕೆ ನಿಲ್ಲಿಸದಿದ್ದರೆ ಪಂಚಾಯತ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2