# Tags
#ಸಂಘ, ಸಂಸ್ಥೆಗಳು

ಕೂಡ್ಲಿಗಿ : ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ (Kudligi: 8th annual free eye check-up and surgery camp by the Friends’ Association)

ಕೂಡ್ಲಿಗಿ : ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

  (Koodligi) ಕೂಡ್ಲಿಗಿ : ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ, ದಿವಂಗತ ಅಬ್ದುಲ್ ರೌಫ್ ಸಾಹೇಬ್ ಸ್ನರಣಾರ್ಥವಾಗಿ 8ನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಿರೇಮಠ ಕಲ್ಯಾಣ ಮಂಟಪದಲ್ಲಿ ನೆರವೇರಿತು.  

ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ, ಅಬ್ದುಲ್ ರಹೆಮಾನ್ ನೇತೃತ್ವದಲ್ಲಿ ಆಯೋಜಿಸಲಾಹಿದ್ದ ಶಿಬಿರದಲ್ಲಿ  ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿಯವರು, ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಅವರು ತಮ್ಮ ಆಶೀರ್ಚನದಲ್ಲಿ, ಸ್ನೇಹಿತರ ಬಳಗದವರು  ಜನಸೇವೆಯೇ ಜನಾರ್ಧನ ಸೇವೆ ಎಂಬ ನುಡಿಗಟ್ಟಿನಂತೆ ಸೇವೆ  ನೀಡುತ್ತಿದ್ದಾರೆ. ಬಸವಣ್ಣನವರ ವಚನದಂತೆ ಸರ್ವೇ ಜನ ಸುಖಿನೋ ಭವಂತು ಅನ್ನುವ ಹಾಗೆ, ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರೆಹಮಾನ್‌ರವರು ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

  ಅಖಿಲ್ ಮೌಲಾನ ಸಾಬ್ ಮಾತನಾಡಿ, ಅಲ್ಲಾಹ ಮಾನವನನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ. ಅಶಕ್ತ ಜನರ ಸೇವೆ ಮಾಡುವುದರಿಂದ, ಸೇವೆಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಕೋಟಿ ಪುಣ್ಯ ದೊರಕಲಿದೆ ಎಂದರು.

 ಚೋರನೂರಿನ ವಾಲ್ಮೀಕಿ ಸಮುದಾಯದ ಹಿರಿಯರಾದ ಅಡಿವಪ್ಪ ಸಮಯೋಚಿತವಾಗಿ ಮಾತನಾಡಿದರು.

ಹಿರಿಯ ಗುತ್ತಿಗೆದಾರ ಇಸ್ಮಾಯಿಲ್ ಸಾಬ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು

 ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹೆಮಾನ್,  ಹೊಸಪೇಟೆಯ ನೇತ್ರ ಲಕ್ಷ್ಮಿ ವೈದ್ಯಾಲಯದ ವೈದ್ಯರಾದ ಅಶ್ವಿನಿ ಆರ್.,  ಶ್ರೀನಿವಾಸ್ ದೇಶಪಾಂಡೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿರುವ ಗಣ್ಯರಿಗೆ, ಸಾಧಕರಿಗೆ ಗೌರವ ಸನ್ಮಾನ  ಹಮ್ಮಿಕೊಳ್ಳಲಾಗಿತ್ತು.

 ಹೃದಯ ರೋಗ ತಜ್ಞರಾದ ಡಾಕ್ಟರ್ ತಿಪ್ಪೇಸ್ವಾಮಿ, ಮಹಿಳಾ ತಜ್ಞ ವೈದ್ಯರಾದ ನಾಗರಾಜ, ನ್ಯಾಯಾಧೀಶರಾದ ಭುವನೇಶ್ವರಿ, ಪ್ರಿಯಾಂಕ, ಐಪಿಎಸ್ ವಿಜಯ್ ಕುಮಾರ್, ಬ್ಲಾಕ್ ಕಮಾಂಡೋ ಅಮೀನ್ ಉದ್ದಿನ್ ಬಾಷ, ಅಕ್ಯೂ ಪಂಚರ್ ತಜ್ಞರಾದ ಕಣ್ಣನ್, ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಭಾಕರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಉಸ್ಮಾನ್ ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ, ಕರ್ನಾಟಕ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಜಿಂಕಲ್ ನಾಗಮಣಿ,  ಉದ್ಯಮಿ ಪಟ್ಟಣ ಶೆಟ್ರು ಪಂಪಣ್ಣ, ವಾಲ್ಮೀಕಿ ಸಮುದಾಯದ ಹಿರಿಯರಾದ, ಮಲ್ಲಾಪುರ ಭರಮಣ್ಣ, SDMC ಮುಖಂಡರಾದ ಅಂಗಡಿಗಣೇಶ, ಗ್ರಾಮದೇವತೆಯ ಆಯಗಾರರಾದ ತಳವಾರ್ ಸುರೇಶ್, ಕ್ರೈಸ್ತ ಧರ್ಮಗುರು ಡೇವಿಡ್, ಸ್ನೇಹಿತರ ಬಳಗದ ಮಹಮ್ಮದ್ ಫಯಾಜ್, ಅಬ್ದುಲ್ ಜಬ್ಬಾರ್, ಅಬ್ದುಲ್ ವಾಹಿದ್, ಅರಣ್ಯ ಇಲಾಖೆಯ ಮಹೇಶ,  ಆತಿಫ್, ಆಸಿಫ್, ವಿವಿದ ಸಮುದಾಯಗಳ ಮುಖಂಡರು, ಪತ್ರಕರ್ತರು ವೇದಿಕೆಯಲ್ಲಿದ್ದರು.

  ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು, ಎನ್ಎಸ್ಎಸ್ ವಿದ್ಯಾರ್ಥಿಗಳು, ಮತ್ತು ರಾಘವೇಂದ್ರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದವರು, ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಎನ್ಎಸ್ಎಸ್ ವಿದ್ಯಾರ್ಥಿಗಳು, ಕಾಲೇಜಿನ ಎನ್.ಎಸ್. ಎಸ್ ಘಟಕ ದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿ ಸ್ವಯಂ ಸೇವಕರಾಗಿ ಸೇವೆಗೈದರು.

ಪೋಲೀಸ್ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದು, ಶಾಂತಿ ಸುವ್ಯವಸ್ಥೆಯಿಂದ ಶಿಬಿರ ಯಶಸ್ವಿಗೊಳಿಸಿದರು.

ಶಿಬಿರದಲ್ಲಿ ನೂರಾರು ಜನ ನೇತ್ರ ತಪಾಸಣೆ ಮಾಡಿಸಿಕೊಂಡರು. ನೂರಕ್ಕೂ ಹೆಚ್ಚು ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.

ಸಾಹಿತಿ ಪತ್ರಕರ್ತ ಕೆ.ಎಮ್.ವೀರೇಶ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2