# Tags
#ಧಾರ್ಮಿಕ

ಹೆಜಮಾಡಿ: ಶ್ರೀ ಕೋರ್ದ್ದಬ್ಬು ದೈವಸ್ಥಾನದ ನೇಮೋತ್ಸದ ಕುರಿತು ಸಭೆ (Hejamadi: Meeting regarding the Nemothsava of Sri Korddabu Daivasthana)

ಹೆಜಮಾಡಿ: ಶ್ರೀ ಕೋರ್ದ್ದಬ್ಬು ದೈವಸ್ಥಾನದ ನೇಮೋತ್ಸದ ಕುರಿತು ಸಭೆ

(Hejamady) ಹೆಜಮಾಡಿ : ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಹೆಜಮಾಡಿ ಇದರ ನೇಮೋತ್ಸದ ಪ್ರಯುಕ್ತ ಹೆಜಮಾಡಿ ಗರಡಿ ಮನೆತನದ ಮುಖ್ಯಸ್ಥರಾದ ರವಿ ಶೆಟ್ಟಿ ಮುಂಬೈಯವರ ಅಧ್ಯಕ್ಷತೆಯಲ್ಲಿ ಹೆಜಮಾಡಿ ಕೋರ್ದ್ದಬ್ಬು ದೈವ ಸನ್ನಿಧಿಯಲ್ಲಿ ಭಾನುವಾರ ಬೆಳಿಗ್ಗೆ ಸಭೆ ಜರುಗಿತು .

 ಸಭೆಯಲ್ಲಿ ದೈವಸ್ಥಾನದ ಸಮಿತಿ ರಚಿಸಿ, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಲಾಯಿತು.

  ಗರಡಿ ಮನೆತನದ ರವೀಂದ್ರ ಶೆಟ್ಟಿರವರನ್ನು ಸರ್ವಾನುಮತದಿಂದ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುಧೀಶ್ ಶೆಟ್ಟಿ, ಮಹೇಶ್ ಶೆಟ್ಟಿ, ಸುರೇಶ್ ದೇವಾಡಿಗ, ರಾಧಾಕೃಷ್ಣ ಮಲ್ಯ, ಶ್ರೀನಿವಾಸ ಪೂಜಾರಿ ಹಾಗೂ ಮೂಡುಕರೆ ಗ್ರಾಮಸ್ಥರು ಹಾಗೂ ದೈವಸ್ಥಾನದ ಹತ್ತು ಸಮಸ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2