ಅದಮಾರು ಹಿರಿಯ ಪ್ರಾಥಮಿಕ ಶಾಲೆ : ಶತಮಾನೋತ್ಸವ ಅಂಗವಾಗಿ ಲಾಂಛನ ಬಿಡುಗಡೆ, ಹಳೆ ವಿದ್ಯಾರ್ಥಿಗಳ ಸಮ್ಮಿಲನ (Adamaru Higher Primary School : Logo released as part of centenary celebrations, reunion of alumni)

ಅದಮಾರು ಹಿರಿಯ ಪ್ರಾಥಮಿಕ ಶಾಲೆ : ಶತಮಾನೋತ್ಸವ ಅಂಗವಾಗಿ ಲಾಂಛನ ಬಿಡುಗಡೆ, ಹಳೆ ವಿದ್ಯಾರ್ಥಿಗಳ ಸಮ್ಮಿಲನ
(Adamaru) ಅದಮಾರು: ಏಪ್ರಿಲ್ 11 ಮತ್ತು 12ರಂದು ನಡೆಯುವ ಅದಮಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಅಂಗವಾಗಿ ಲಾಂಛನ ಬಿಡುಗಡೆ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಶಾಲಾ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸುದರ್ಶನ್ ವೈ ಎಸ್ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಲಾಂಛನವನ್ನು ಶಾಲಾ ಸಂಚಾಲಕ ಎ ಜಯ ಶೆಟ್ಟಿಯವರು ಬಿಡುಗಡೆಗೊಳಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ನಾರಾಯಣ್ ಶೆಟ್ಟಿಯವರು ಮನವಿ ಪತ್ರ ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಸದಾಶಿವ ಶೆಟ್ಟಿಯವರು ವಹಿಸಿ, ಶತಮಾನೋತ್ಸವದ ಆಚರಣೆಗೆ ಸರ್ವರ ಸಹಕಾರ ಯಾಚಿಸಿದರು.
ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ತೋಣಿತ್ತಾಯ, ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಂಡಂತಾಯ, ಉಪಾಧ್ಯಕ್ಷರಾದ ವಾಮನ ಕುಂಡಂತಾಯ, ಕಾರ್ಯಕ್ರಮ ಸಂಘಟಕ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
ಕುಮಾರಿ ದೀಕ್ಷಾ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ದೇವಿಕಾರವರು ಸ್ವಾಗತಿಸಿದರು. ಗಣೇಶ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ನ್ಯಾಯವಾದಿ ಶಶಿಧರ್ ಶೆಟ್ಟಿ ವಂದಿಸಿದರು.