ಉಚ್ಚಿಲ : ಮಿನಿ ಲಾರಿ ಪಲ್ಟಿ, ಚಾಲಕನಿಗೆ ಗಾಯ (Uchila: Mini lorry overturns, driver injured)

ಉಚ್ಚಿಲ : ಮಿನಿ ಲಾರಿ ಪಲ್ಟಿ, ಚಾಲಕನಿಗೆ ಗಾಯ
(Uchila) ಉಚ್ಚಿಲ: ಉಚ್ಚಿಲ ರಾಹೆ 66 ರ ರಿಕ್ಷಾ ನಿಲ್ದಾಣದ ಎದುರು ಚಾಲಕರ ನಿಯಂತ್ರಣ ತಪ್ಪಿ ಮಿನಿ ಲಾರಿಯೊಂದು ಮುಗುಚಿ ಬಿದ್ದ ಘಟನೆ ಶನಿವಾರ ಮುಂಜಾನೆ 3:00 ಸುಮಾರಿಗೆ ಘಟಿಸಿದೆ.
ಬಿಜಾಪುರದಿಂದ ಮಂಗಳೂರಿಗೆ ದ್ರಾಕ್ಷಿ ಹಣ್ಣನ್ನು ಹೇರಿಕೊಂಡು ಸಾಗುತ್ತಿದ್ದಾಗ ಮಿಲಿ ಲಾರಿ, ಉಚ್ಚಿಲ ರಾಹೆ 66 ರಲ್ಲಿ ವೇಗ ತಡೆಗೆ ಇರಿಸಲಾದ ಕಬ್ಬಿಣದ ಡ್ರಮ್ಮಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ, ಚಾಲಕನ ನಿಯಂತ್ರಣ ತಪ್ಪಿದ ಮಿನಿಲಾರಿ, ರಾಹೆ 66 ರಲ್ಲಿ ಮುಗುಚಿ ಬಿದ್ದು, ಡಿವೈಡರ್ ಏರಿದೆ. ಈ ಸಂದರ್ಭ ಚಾಲಕ ಗಾಯಗೊಂಡಿದ್ದು, ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ರಾಕ್ಷಿ ಹಣ್ಣು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಟೋಲ್ ಗೇಟಿನ ಟಾವಿಂಗ್ ವಾಹನ ಆಗಮಿಸಿ ಮಿನಿಲಾರಿಯನ್ನು ಹೆದ್ದಾರಿಯಿಂದ ಪಕ್ಕಕ್ಕೆ ಸರಿಸಿದೆ. ಈ ಸಂದರ್ಭ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.