ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು (Udupi: Instrumental artist commits suicide)

ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು
(Udupi) ಉಡುಪಿ : ಮನೆಯ ಮಾಡಿನ ಪಕ್ಕಾಸಿಗೆ ಯುವಕನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸನಿಹ ಬುಧವಾರ ನಡೆದಿದೆ.
ಆತ್ಮಹತ್ಯೆ ಗೈದಿರುವ ಯುವಕ ಬೈಲಕೆರೆಯ ರಾಮಕೃಷ್ಣ ದೇವಾಡಿಗರ ಪುತ್ರ, ವಾದ್ಯ ಕಲಾವಿದ ಅಶ್ವಥ್ (32ವ) ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಸುನಿಲ್ ಬೈಲಕೆರೆಯವರ ಸಹಾಯದಿಂದ ಸಮಾಜಸೇವಕ ನಿತ್ಯಾನಂದ ಒಳಕಾಡುರವರು ಘಟನೆ ನಡೆದಿರುವ ಕೆಲವು ಕ್ಷಣದಲ್ಲಿಯೇ ನೇಣು ಕುಣಿಕೆಯಿಂದ ಕೆಳಗೆ ಇಳಿಸಿ, ಅಶ್ವಥ್‌ರವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ.
ನಗರ ಪೋಲಿಸ್ ಠಾಣೆಯ ಎ. ಎಸ್. ಐ ಸುಭಾಸ್ ಕಾಮತ್, ಹೆಡ್ ಕಾನ್ಸಟೇಬಲ್ ಹರೀಶ್ ಮಾಳ, ಜಯಕರ್ ಕಾನೂನು ಪ್ರಕ್ರಿಯೆ ನಡೆಸಿದರು.