ಎರ್ಮಾಳು ಶ್ರೀನಿಧಿ ಕುಣಿತ ಭಜನಾ ತಂಡಕ್ಕೆ ತೃತೀಯ ಪ್ರಶಸ್ತಿ(Third prize for the Yermalu Srinidhi Kunita Bhajana team)

ಎರ್ಮಾಳು ಶ್ರೀನಿಧಿ ಕುಣಿತ ಭಜನಾ ತಂಡಕ್ಕೆ ತೃತೀಯ ಪ್ರಶಸ್ತಿ
(Yermal) ಎರ್ಮಾಳು: ಶಿವರಾತ್ರಿ ಪ್ರಯುಕ್ತ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಜಿಲ್ಲಾಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಎರ್ಮಾಳಿನ ಶ್ರೀ ನಿಧಿ ಮಹಿಳಾ ಕುಣಿತ ಭಜನಾ ತಂಡವು ತೃತೀಯ ಸ್ಥಾನವನ್ನು ಪಡೆದಿದೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನಿಸಿದರು.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಶ್ರೀ ಮಧ್ವರಾಜ್ ಭಟ್, ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಶೆಟ್ಟಿ ಬೆಳ್ಳೆ ದೊಡ್ಡಮನೆ, ಹರೀಶ್ ಶೆಟ್ಟಿ ಕಕ್ರಮನೆ, ವಿಶ್ವನಾಥ್ ಶೆಟ್ಟಿ ನಡಿಮನೆ, ದಯಾನಂದ ಶೆಟ್ಟಿ ಪಾಟೀಲರ ಮನೆ, ಶಿವರಾತ್ರಿ ಉತ್ಸವ ಸಮಿತಿ ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.