# Tags
#ಸಂಘ, ಸಂಸ್ಥೆಗಳು

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ “ಉಡುಪಿ ಚಾವಡಿ “ಅಭಿಯಾನ ಪ್ರಾರಂಭ (Kannada Sahitya Parishad Udupi Taluk Unit “Udupi Chavadi” campaign launched)

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಉಡುಪಿ ಚಾವಡಿಅಭಿಯಾನ ಪ್ರಾರಂಭ

(Udupi) ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಉಡುಪಿ ತಾಲೂಕು ಘಟಕ ವತಿಯಿಂದ, ಮ್ಯಾಕ್ಸ್ ಮೀಡಿಯಾ ಸಹಕಾರದಲ್ಲಿ ನಡೆಯುವ ನೂತನ ಅಭಿಯಾನ “ಉಡುಪಿ ಚಾವಡಿ” ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ರವರು ಜ.31ರಂದು ಆವರಣದಲ್ಲಿ ಬಿತ್ತಿ ಪತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ಹತ್ತು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸಾದ ಈ ಕನ್ನಡ ಸಾಹಿತ್ಯ ಪರಿಷತ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡ ನಾಡು ನುಡಿ ಸಂಸ್ಕೃತಿಕವಾಗಿ ವಿಶೇಷವಾದ ಕಾಯಕವನ್ನು ಮಾಡುತ್ತಿದೆ ಎಂದರು.

 ಉಡುಪಿಗೆ ಬರುವ ಮಹಾನ್ ವ್ಯಕ್ತಿಗಳ ಮಾತುಗಳು ಈ ಮೂಲಕ ದಾಖಲೀಕರಣಗೊಳ್ಳಲಿರುವುದು ಅಭಿನಂದನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಮಾತನಾಡಿ, ಉಡುಪಿ ಒಂದು ಸಾಂಸ್ಕೃತಿಕ ನಗರ. ಉಡುಪಿಗೆ ಬರುವ ವಿಶೇಷ ಅತಿಥಿಗಳನ್ನು ಮತ್ತು ಉಡುಪಿಯಲ್ಲಿರುವ ಸಾಧನೆ ಮಾಡಿದ ಸಾಧಕರನ್ನು ಜನರಿಗೆ ಪರಿಚಯಿಸುವ ನೂತನ ಅಭಿಯಾನ ಉಡುಪಿ ಚಾವಡಿ ಎಂದರು.

  ವೇದಿಕೆಯಲ್ಲಿ ಅಭಿಯಾನದ ಸಂಯೋಜಕಿ ಪೂರ್ಣಿಮಾ ಜನಾದ೯ನ್, ಮ್ಯಾಕ್ಸ್ ಮೀಡಿಯಾದ ವಿನಾಯಕ್, ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಪ್ರಭು ಕವಾ೯ಲು, ಸತೀಶ್ ಕೊಡವೂರು, ಸಿದ್ದಲಿಂಗಯ್ಯ ಸ್ವಾಮಿ ಚಿಕ್ಕಮಠ ಮುಂತಾದವರಿದ್ದರು.

Leave a comment

Your email address will not be published. Required fields are marked *

Emedia Advt3