ಕರಂದಾಡಿ ಶ್ರೀವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ: ಆಲಯ ಸಮರ್ಪಣೆ, ಪುನರ್‌ಪ್ರತಿಷ್ಠೆ (Karandadi Sri Vishnumurthy Brahmalingeshwar Temple: Temple Dedication, Reconsecration)

ಕರಂದಾಡಿ ಶ್ರೀವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ: ಆಲಯ ಸಮರ್ಪಣೆ, ಪುನರ್‌ಪ್ರತಿಷ್ಠೆ
(Kaup) ಕಾಪು: ಮಜೂರು ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಆಲಯ ಸಮರ್ಪಣೆ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪುನರ್ ಪ್ರತಿಷ್ಠೆ ಸೋಮವಾರ ನೆರವೇರಿತು.
ದೇವಸ್ಥಾನದ ಪ್ರಧಾನ, ತಂತ್ರಿ ವೇದಮೂರ್ತಿ ಕಳತ್ತೂರು ಉದಯ ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ ಮತ್ತು ಅರ್ಚಕ ವೃಂದದ ಸಹಭಾಗಿತ್ವದಲ್ಲಿ ಪ್ರತಿಷ್ಠಾ ವಿಧಿವಿಧಾನ ನೆರವೇರಿಸಲಾಯಿತು.
ಶ್ರೀ ಶಿಲಾಮಯ ಆಲಯ, ಸುತ್ತುಪೌಳಿ, ಪಾಕಶಾಲೆ ಸಮರ್ಪಣೆ, ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠೆ, ಪ್ರತಿಜ್ಞಾವಿಧಿ, ಮಹಾಪೂಜೆ ಜರುಗಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ಬಲಿ, ಶಿಲಾ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ ಕ್ಷೇತ್ರಪಾಲ ಪ್ರತಿಷ್ಠೆ, ಕಲಶ ಮಂಟಪ ಸಂಸ್ಕಾರ ನಡೆಯಿತು. ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತ್ಯಜಿತ್ ಶೆಟ್ಟಿ ಕರಂದಾಡಿಗುತ್ತು, ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ ಕರಂದಾಡಿ ಗುತ್ತು, ಕೋಶಾಧಿಕಾರಿ ಕೆ. ಪದ್ಮನಾಭ ಶಾನುಭಾಗ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್, ಗೌರವಾಧ್ಯಕ್ಷರಾದ ವಿಠಲ ಶೆಟ್ಟಿ ಪಡುಬರ್ಪಾಣೆ, ಮೋಹನ್ ಶೆಟ್ಟಿ ಬರ್ಪಾಣೆ, ಪ್ರೇಮನಾಥ ಶೆಟ್ಟಿ ಗುಡ್ಡಶೆಟ್ರ ಮನೆ, ಭಾಸ್ಕರ್ ಶೆಟ್ಟಿ ಕೆಳಮನೆ, ಭಾಸ್ಕರ್ ಶೆಟ್ಟಿ ಬರ್ಪಾಣೆ, ವಿಜಯ ಶೆಟ್ಟಿ ಕಾರ್ಕಳ, ಪ್ರವೀಣ್, ಪ್ರಮುಖರಾದ ದಿನೇಶ್ ಶೆಟ್ಟಿ ಪಡುಮನೆ, ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಲಕ್ಷ್ಮೀ ಜಯರಾಮ ಶೆಟ್ಟಿ ಕೆ.ವಾಸು ದೇವ ರಾವ್, ಉಮೇಶ್ ಶೆಟ್ಟಿ ಪಡುಬರ್ಪಾಣೆ, ಶ್ರೀಧರ್ ಶೆಟ್ಟಿಗಾರ್, ತ್ರಿವಿಕ್ರಮ್ ಭಟ್, ಡಾ. ಪ್ರಜ್ಞಾ ಮಾರ್ಪಳ್ಳಿ, ಶರತ್ ಶೆಟ್ಟಿಗಾರ್, ನಿರಂಜನ್ ಶೆಟ್ಟಿ ಪ್ರಕಾಶ್ ಶೆಟ್ಟಿ ಶ್ಯಾಮ ಶೆಟ್ಟಿಗಾರ, ರವಿ ನಾಯ್ಕ, ಮುದ್ದು ಪೂಜಾರಿ, ಭಾಸ್ಕರ ಕುಮಾರ್, ಶರ್ಮಿಳಾ ಆಚಾರ್ಯ, ಕೃಷ್ಣ ರಾವ್, ಸತೀಶ್ ಶೆಟ್ಟಿ, ನಿರ್ಮಲ್ ಕುಮಾರ್ ಹೆಗ್ಡೆ, ಅರುಣ, ರತ್ನಾಕರ ಶೆಟ್ಟಿ ಕರಂದಾಡಿ, ರಾಮಚಂದ್ರ ಆಚಾರ್ಯ, ಲಕ್ಷ್ಮೀಶ ಭಟ್, ರವೀಂದ್ರ ಮಲ್ಲಾರ್, ಜಯ ಗೌಡ, ಯಾದವಕೃಷ್ಣ ಶೆಟ್ಟಿ ದಯಾನಂದ ಶೆಟ್ಟಿ ವಿಠಲ ಎಸ್ ಶೆಟ್ಟಿ, ಶಶಿಧರ ಶೆಟ್ಟಿ ತೋಕೂರ್ ಗುತ್ತು, ದೇವಿಪ್ರಾದ್ ಶೆಟ್ಟಿ, ಅಕ್ಷಯ ಜೆ. ಶೆಟ್ಟಿ ಉಪಸ್ಥಿತರಿದ್ದರು.
ರಾತ್ರಿ ‘ಒರಿಯಾಂಡಲಾ ನಂಬೋಡು’ ತುಳು ನಾಟಕ ಪ್ರದರ್ಶನ ನೆರವೇರಿತು.