# Tags
#ಶಾಲಾ ಕಾಲೇಜು #ಸಂಘ, ಸಂಸ್ಥೆಗಳು

ಕರ್ಣಾಟಕ ಬ್ಯಾಂಕ್:‌ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ (Karnataka Bank: School bus handed over to Kaipunjalu Visvesha Theertha Vidyalaya)

ಕರ್ಣಾಟಕ ಬ್ಯಾಂಕ್:‌ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ

(Kaup) ಕಾಪು: ಉಡುಪಿ ಕರ್ಣಾಟಕ ಬ್ಯಾಂಕ್ ಶಾಖೆಯು ತಮ್ಮ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರಿಸಿದರು.

  ಶ್ರೀ ಪೇಜಾವರ ಅಧೋಕ್ಷಜ ಮಠದ  ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡಿದ್ದರು.

ಅವರು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆ ಹೆಚ್ಚಿದೆ. ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದ್ದಲ್ಲದೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ  ಸಮಾಜದ ಬೆಳೆವಣಿಗೆಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.

  ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ಜಿ.ಎಂ ಶ್ರೀ ವಿನಯ್ ಭಟ್, ಶಾಲಾ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್, ಪಿ ರಾಮದಾಸ್ ಮಡ್ಮಣ್ಣಾಯ, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ  ವಾದಿರಾಜ್ ಭಟ್ ಕೆ, ಡೆಪ್ಯುಟಿ ರೀಜನಲ್ ಹೆಡ್ ಮನೋಜ್ ಕೋಟ್ಯಾನ್, ಮುಖ್ಯ ಪ್ರಬಂಧಕ ಪ್ರದೀಪ್ ಕುಮಾರ್, ಸ್ಥಳೀಯ ಶಾಖ ಪ್ರಬಂಧಕರು ಹಾಗೂ ಪ್ರಾದೇಶಿಕ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3