# Tags
#ಧಾರ್ಮಿಕ #ವಿಡಿಯೋ

ಕಾಪು ಮಾರಿಯಮ್ಮನ ಗುಡಿಯಿಂದ ಕಾಪುವಿಗೆ ಕೀರ್ತಿ ಬಂದಿದೆ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ (Kaup has gained fame from the temple of Kaup Mariamma: Dharmasthala’s Dharmadhikari Veerendra Heggade)

 ಕಾಪು ಮಾರಿಯಮ್ಮನ ಗುಡಿಯಿಂದ ಕಾಪುವಿಗೆ ಕೀರ್ತಿ ಬಂದಿದೆ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ

(Kaup) ಕಾಪು,ಮಾ.4- ಕಾಪು ಅಂದರೆ ಕಾಯುವವಳು. ರಕ್ಷಣೆ ಮಾಡುವವಳು. ಕಾಪು ಮಾರಿಯಮ್ಮನ ಗುಡಿಯಿಂದ ಕಾಪುವಿಗೆ ಕೀರ್ತಿ ಬಂದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆ ನುಡಿದರು.

ಅವರು ಮಂಗಳವಾರ ಕಾಪು ಶ್ರೀ ಹೊಸಮಾರಿಗುಡಿಯ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಚ್ಚಂಗಿ ಮಹಾತಾಯಿಯ ಬ್ರಹ್ಮಕಲಶೋತ್ಸವ ಸಂದರ್ಭ ನಡೆದ ಸಭಾ ಕಾಯಕ್ರಮದಲ್ಲಿ ಆಶಿರ್ವಚನ ನೀಡಿದರು.

ಕಾಪುವಿನ ಅಮ್ಮ ಇಡೀ ಜಗತ್ತನ್ನು ಕಾಯುವವಳು. ದುಷ್ಟ ಶಕ್ತಿಗಳನ್ನು ದಮನ ಮಾಡಿ ಶಿಷ್ಟ ಜನರ  ಸಂರಕ್ಷಣೆ ಕಾಪುವಿನ ಅಮ್ಮ ಮಾಡುವಳು. ಎಲ್ಲಾ ದೇವಸ್ಥಾನಗಳಲ್ಲಿ ಶಿಷ್ಟ ಜನರಿದ್ದಾರೆ. ಆದರೆ ದುಷ್ಟ ಶಕ್ತಿಗಳನ್ನೆಲ್ಲ ಸಂಹರಿಸಿ  ಶಿಷ್ಟ ಜನರ ಸಂರಕ್ಷಣೆ ಮಾಡುವ ಕೆಲವೇ ಸಾನಿಧ್ಯಗಳಲ್ಲಿ ಕಾಪುವಿನ ಮಾರಿಯಮ್ಮ ಕ್ಷೇತ್ರವೂ ಒಂದು.

 ಭಕ್ತರೆಲ್ಲರೂ ಉತ್ಸಾಹ, ಉಲ್ಲಾಸದಿಂದ ಸೇರಿ ತುಂಬಾ ಶ್ರದ್ಧಾ-ಭಕ್ತಿಯಿಂದ ಕಾಪುವಿನ ಅಮ್ಮನ ಸೇವೆಯನ್ನು ಮಾಡಿದ್ದೀರಿ. ನಾನು ನಾಡಿನ ಅನೇಕ ದೇವಸ್ಥಾನಗಳನ್ನು ಕಂಡಿದ್ದೇನೆ. ಆದರೆ ಕಾಪುವಿನ ಅಮ್ಮನ ದೇವಸ್ಥಾನದ ಶಿಲ್ಪ ಹಾಗೂ ಮರದ ಕೆತ್ತನೆಗಳು ಅದ್ಭುತವಾಗಿ ಮೂಡಿ ಬಂದಿದೆ. ಇದರಿಂದ ಭವ್ಯ ದೇವಸ್ಥಾನ ನಿರ್ಮಾಣವಾಗಿದೆ.

 ಈ ದೇವಸ್ಥಾನ ಕಂಡು ತುಂಬಾ ಸಂತೋಷವಾಗಿದೆ. ಪ್ರಸ್ತುತ ದೈವಸ್ಥಾನ- ದೇವಸ್ಥಾನಗಳ ಜೀರ್ಣೋದ್ಧಾರ ಅಲ್ಲಲ್ಲಿ ನಡೆಯುತ್ತಿದೆ. ಭಕ್ತರ  ಸಹಕಾರದಿಂದ ನಾಡಿನ ಎಲ್ಲಾ ದೇವಸ್ಥಾನಗಳು ಅಭಿವೃದ್ಧಿ ಹೊಂದಬೇಕು. ನಾವು ಮಾಡುವ ಸೇವೆಯಲ್ಲಿ ಅಹಂಕಾರ ಇರಕೂಡದು. ಶ್ರದ್ಧಾ- ಭಕ್ತಿಯಿಂದ ಮಾಡುವ ಸೇವೆಗೆ, ಧರ್ಮ ಕಾರ್ಯಗಳಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ.

 ಕುಂಭಮೇಳದಲ್ಲಿ ಕೋಟ್ಯಾಂತರ ಮಂದಿ ಸ್ನಾನ ಮಾಡಿ ತಮ್ಮ  ಪಾಪ -ದೋಷಗಳನ್ನು ತೊಳೆದುಕೊಂಡಿದ್ದಾರೆ. ಅಂತೆಯೇ ಕಾಪು ಅಮ್ಮನ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಸೇರಿದ ಭಕ್ತರು  ಪ್ರಾರ್ಥನೆ, ಸೇವೆಯನ್ನು ಸಲ್ಲಿಸಿ ತಮ್ಮ ಪಾಪ, ದೋಷಗಳ ಪರಿಹಾರ ಮಾಡಿಕೊಳ್ಳಬೇಕು. ಕ್ಷೇತ್ರದ ಉನ್ನತಿಗೆ ಸಹಕರಿಸಿದ ಎಲ್ಲಾ ಭಕ್ತರಿಗೂ, ದಾನ ನೀಡಿದವರಿಗೂ, ದಾನವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗ ಮಾಡಿದವರಿಗೂ, ವಿವಿಧ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದವರಿಗೂ, ಶ್ರಮವಹಿಸಿದವರಿಗೂ ಮಾರಿಯಮ್ಮ ಅನುಗ್ರಹಿಸಲಿ. ಕಾಪುವಿನ ಅಮ್ಮನ ಕ್ಷೇತ್ರ ಬೆಳಗಲಿ ಎಂದು ತಮ್ಮ ಆಶೀರ್ಚನದಲ್ಲಿ ಹೇಳಿದರು.

 ಈ ಸಂದರ್ಭ ಸಮಿತಿಯ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್‌ ಶೆಟ್ಟಿ, ಕಾರ್ಯಾಧ್ಯಕ್ಷ ಉದಯ ಸುಂದರ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ  ವಿನಯಕುಮಾರ್ ಸೊರಕೆ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯ ಮಾಧವ ಪಾಲನ್, ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಭಗವಾನ್ ದಾಸ್ ಶೆಟ್ಟಿಗಾರ್,  ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್, ರಮೇಶ್‌ ಹೆಗಡೆ ಕಲ್ಯ, ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ಯೋಗೇಶ್ ಶೆಟ್ಟಿ, ಶಶಿಧರ್ ಶೆಟ್ಟಿ ಮಲ್ಲಾರ್, ಅನಿಲ್ ಬಲ್ಲಾಲ್ ಕಾಪು, ಹರೀಶ್ ನಾಯಕ್ ಕಾಪು, ರವಿ ಸುಂದರ ಶೆಟ್ಟಿ, ಪುಣೆ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಉದಯ ಸುಂದರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಸುಗ್ಗಿ ಸುಧಾಕರ ಶೆಟ್ಟಿ, ಸದಾಶಿವ ಎ. ಕರ್ಕೇರಾ, ರೋಷನ್‌ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ ಮುಂಬಯಿ, ಗೀತಾಂಜಲಿ ಸುವರ್ಣ,  ಶಿಲ್ಪಾ ಸುವರ್ಣ, ಶಾಂತಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 ವೇದಿಕೆಯಲ್ಲಿ ಹೋಟೆಲ್ ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ ಇದರ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್ ರವರನ್ನು ಡಾ.ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.

ವಿಜಯ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆಗೈದರು. ರೇಣುಕಾ ಪ್ರಾರ್ಥಿಸಿದರು. ದಾಮೋದರ್ ಶರ್ಮಾ ಸ್ವಾಗತಿಸಿದರು. ಬಂಟರ ಸಂಘದ ಬಂಟರವಾಣಿಯ ಗೌ.ಪ್ರ. ಸಂಪಾದಕ ಅಶೋಕ್ ಪಕ್ಕಳ ನಿರೂಪಿಸಿದರು.

Leave a comment

Your email address will not be published. Required fields are marked *

Emedia Advt3