# Tags
#ಧಾರ್ಮಿಕ #ರಾಜಕೀಯ

ಕಾಪು ಮಾರಿಯಮ್ಮ ದೇವರ ಗದ್ದುಗೆ ಪ್ರತಿಷ್ಠಾಪನೆಯ ಮೊದಲ ಪ್ರಸಾದ ಸಿಕ್ಕಿದ್ದು ನನ್ನ ಭಾಗ್ಯ : ಡಿಸಿಎಂ ಡಿಕೆ ಶಿವಕುಮಾರ್‌ (It is my privilege to receive the first offering of the installation of the Kaup Mariyamma Devi’s throne: DCM DK Shivakumar)

ಕಾಪು ಮಾರಿಯಮ್ಮ ದೇವರ ಗದ್ದುಗೆ ಪ್ರತಿಷ್ಠಾಪನೆಯ ಮೊದಲ ಪ್ರಸಾದ ಸಿಕ್ಕಿದ್ದು ನನ್ನ ಭಾಗ್ಯ : ಡಿಸಿಎಂ ಡಿಕೆ ಶಿವಕುಮಾರ್

(Kaup) ಕಾಪು : ಕಾಪು ಮಾರಿಯಮ್ಮ ದೇವರ ಗದ್ದುಗೆ ಪ್ರತಿಷ್ಠಾಪನೆಯ ಮೊದಲ ಪ್ರಸಾದ ಸಿಕ್ಕಿದ್ದು ನನ್ನ ಭಾಗ್ಯ. ಸರಕಾರದ ಹಣವಿಲ್ಲದೆ ಭಕ್ತರು ಸ್ವ ಇಚ್ಛೆಯಿಂದ ನೀಡಿದ ಹಣದಲ್ಲಿ ಇಷ್ಟು ದೊಡ್ಡ ದೇವಳ ಕಟ್ಟಿದ್ದು ಅದ್ಭುತ. ಕಷ್ಟ ದೂರ ಮಾಡಿ, ರಕ್ಷಿಸುವ ಸನ್ನಿಧಾನ ಕಾಪು. ಇಲ್ಲಿ ಜಾತಿ ಇಲ್ಲ. ಎಲ್ಲರೂ ಮಾನವ ಜಾತಿ. ಧರ್ಮ ಎದ್ದು ಕಾಣುತ್ತಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಎಲ್ಲರಿಗೂ ಒಳಿತಾಗಲಿ ಎಂದು ಕರ್ನಾಟಕ ಸರಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಅವರು ಆದಿತ್ಯವಾರ ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವರ ಮಹಾಸ್ವರ್ಣಪೀಠದೊಂದಿಗೆ (ಗದ್ದಿಗೆ) ವ್ಯಸ್ತಾಂಗಸಮಸ್ತನ್ಯಾಸಪೂರ್ವಕ ಶ್ರೀ ಮಾರಿಯಮ್ಮನ ಪ್ರತಿಷ್ಠೆ, ಶ್ರೀ ಉಚ್ಚಂಗಿದೇವಿಯ ಸ್ವರ್ಣ ಪೀಠದೊಂದಿಗೆ ವ್ಯಸ್ತಾಂಗಸಮಸ್ತನ್ಯಾಸಪೂರ್ವಕ ಶ್ರೀ ಉಚ್ಚಂಗಿದೇವಿಯ ಪ್ರತಿಷ್ಠೆಯಲ್ಲಿ ಪಾಲ್ಗೊಂಡ ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಈ ಸಂದರ್ಭ ದೇವಳದ ವತಿಯಿಂದ ಡಿ.ಕೆ.ಶಿವಕುಮಾರ್ ರವರಿಗೆ ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕೆಪಿ. ಕುಮಾರ ಗುರು ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಯವರು  ಅನುಗ್ರಹ ಪ್ರಸಾದ ನೀಡಿದರು.

ದೇವಳದ ವತಿಯಿಂದ ವಿಷೇಶವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಾವಿರಾರು ಭಕ್ತರೊಂದಿಗೆ ಡಿಕೆಶಿ ಅನ್ನಪ್ರಸಾದ ಸ್ವೀಕರಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಸ್ವಾಗತಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆ ವಿಶ್ವನಾಥ ನಿರೂಪಿಸಿ ವಂದಿಸಿದರು.

ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಜಯಪ್ರಕಾಶ್ ಹೆಗ್ಡೆ, ಮಾಧವ ಪಾಲನ್, ಡಾ. ಸುನೀತಾ ಶೆಟ್ಟಿ, ಮಿಥುನ್ ರೈ,ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತಿಕ್ ಬಾಯಲ್, ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್., ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3