ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವಾರ್ಷಿಕ ರಥೋತ್ಸವ, ಮಹಾ ಅನ್ನ ಸಂತರ್ಪಣೆ (Kaup Sri Lakshmi Janardana Temple’s Annual Chariotsava, Maha Anna Santarpana)

ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವಾರ್ಷಿಕ ರಥೋತ್ಸವ, ಮಹಾ ಅನ್ನ ಸಂತರ್ಪಣೆ
(Kaup) ಕಾಪು: ಮಹತೋಭಾರ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಶ್ರೀದೇವರ ಹಗಲು ರಥೋತ್ಸವ, ಶ್ರೀಮನ್ಮಹಾರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಮಂಗಳವಾರ ನೆರವೇರಿತು.
ರಥೋತ್ಸವದ ಪ್ರಕಿಯೆಯು ಕಳೆದ ಬುಧವಾರದಿಂದ ಮೊದಲ್ಗೊಂಡು, ಫೆ. 20ರವರೆಗೆ ನಡೆಯಲಿದೆ.
ಇಂದು ಬೆಳಿಗ್ಗೆ ಗಂಟೆ 6-00ರಿಂದ ನವಕ ಪ್ರಧಾನ ಯಾಗ, ಕಲಶಾಭಿಷೇಕ, ಷಢದ್ವನ್ಯಾಸ, ಮಹಾಗಣಪತಿ ಏಕನಾರಿಕೇಳ ಗಣಯಾಗ, ಮಹಾಪೂಜೆ, ಗಂಟೆ 9-00ಕ್ಕೆ ರಥಸೂಕ್ತ ಯಾಗ, ರಥ ಸಂಪ್ರೋಕ್ಷಣೆ. ಪೂರ್ವಾಹ್ನ 10.30ಕ್ಕೆ ಮೇಷ ಲಗ್ನದಲ್ಲಿ ರಥಾರೋಹಣ ಹಾಗೂ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನೆರವೇರಿತು.
ತಾ.24.02.2025ನೇ ಸೋಮವಾರ ದೇವಳಕ್ಕೆ ಸಂಬಂಧಪಟ್ಟ ಶ್ರೀ ಧರ್ಮದೈವ ಕಲ್ಕುಡ ದೈವಸ್ಥಾನದಲ್ಲಿ ಧರ್ಮದೈವ ಶ್ರೀ ಕಲ್ಕುಡ ಮತ್ತು ಶ್ರೀ ವರ್ತೆ ದೈವಗಳ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ಜರಗಲಿದೆ.
ಈ ಸಂದರ್ಭ ಆಡಳಿತ ಮಂಡಳಿಯ ಸದಸ್ಯರು ಮತ್ತು ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.