ಕಾಪು ಶ್ರೀ ಹೊಸ ಮಾರಿಗುಡಿ : ನೂತನ ರಾಜಗೋಪುರದ ಮೇಲೆ 5 ಶಿಖರ ಪ್ರತಿಷ್ಠೆ(Kaup Sri New Marigudi: 5 spires installed on the new Rajagopuram)

ಕಾಪು ಶ್ರೀ ಹೊಸ ಮಾರಿಗುಡಿ : ನೂತನ ರಾಜಗೋಪುರದ ಮೇಲೆ 5 ಶಿಖರ ಪ್ರತಿಷ್ಠೆ
(Kaup) ಕಾಪು: ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ನೂತನ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶನಿವಾರನವದುರ್ಗಾ ಮಂಟಪದಲ್ಲಿ ಗಣಹೋಮ, ಲಕ್ಷ್ಮೀ ಪೂಜೆ, ನೂತನ ರಾಜಗೋಪುರದ ಮೇಲೆ 5 ಶಿಖರ ಪ್ರತಿಷ್ಠಾಪನಾ ಕಾರ್ಯಕ್ರಮ ಬೆಳಿಗ್ಗೆ ನೆರವೇರಿತು.
ಹೊಸ ಮಾರಿಗುಡಿಯ ಕಚೇರಿ, ಉಗ್ರಾಣ ಮುಹೂರ್ತ, ರಾಜಗೋಪುರ, ನವದುರ್ಗಾ ಮಂಟಪ ಉದ್ಘಾಟನೆಯೂ ನೆರವೇರಿತು.
ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಆರ್ಚಕರಾದ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಈ ಸಂದರ್ಭ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಶ್ರೀಮತಿ ಬೀನಾ ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರಾದ ವಿಜಯಲಕ್ಷ್ಮೀ ಶೆಟ್ಟಿ, ಮಾಧವ ಪಾಲನ್, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸದಾಶಿವ ಎ ಕರ್ಕೇರಾ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಮಹಿಳಾ ಪ್ರಧಾನ ಸಂಚಾಲಕಿ ಶ್ರೀಮತಿ ಗೀತಾಂಜಲಿ ಎಂ ಸುವರ್ಣ, ಸಂಚಾಲಕಿ ಸಾವಿತ್ರಿ ಗಣೇಶ್, ಕಾಪು ದಿವಾಕರ ಶೆಟ್ಟಿ, ಉಪಸ್ಥಿತರಿದ್ದರು.