ಕಾಪು ಹರೀಶ್ ನಾಯಕ್‌ರವರಿಗೆ ಕಾಪು ಲಯನ್ಸ್ ಸನ್ಮಾನ (Kaup Lions honours Kaup Harish Nayak)

ಕಾಪು ಹರೀಶ್ ನಾಯಕ್‌ರವರಿಗೆ ಕಾಪು ಲಯನ್ಸ್ ಸನ್ಮಾನ
(Kaup) ಕಾಪು : ಕಾಪು ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಹನೀಫ್ ಮೊಹಮ್ಮದ್‌ರವರು ಭೇಟಿ ನೀಡಿದ್ದು, ಈ ಸಂದರ್ಭ ಕರ್ನಾಟಕ ಸರಕಾರದಿಂದ ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ನಾಮ ನಿರ್ದೇಶನಗೊಂಡ ಹರೀಶ್ ನಾಯಕ್ ಕಾಪುರವರನ್ನು ಸನ್ಮಾನಿಸಿದರು.
ಕಾಪು ಲಯನ್ಸ್ ಕ್ಲಬ್‌ನ ಗವರ್ನರ್ ಭೇಟಿ ಕಾರ್ಯಕ್ರಮವು ಕಾಪುವಿನ ಕೆವನ್ ಸಭಾಂಗಣದಲ್ಲಿ ನೆರವೇರಿದೆ. ಈ ಸಂದರ್ಭ ಮಾತನಾಡಿದ ಜಿಲ್ಲಾ ಗವರ್ನರ್ ಹನೀಫ್ ಮೊಹಮ್ಮದ್, ಸುಮಾರು 48 ವರ್ಷಗಳ ಇತಿಹಾಸವುಳ್ಳ ಕ್ಲಬ್ ಅಗಿದ್ದು, ಉತ್ತಮ ಸಮಾಜ ಸೇವೆ ಮಾಡುವ ಮೂಲಕ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಲಬ್ಬಿಗೆ ಒಳ್ಳೆಯ ಸದಸ್ಯರನ್ನು ಸೇರಿಸಿ ಗೋಲ್ಡನ್ ಜುಬ್ಲಿಯನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.
ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಸಪ್ನಾ ಸುರೇಶರವರು ಕಾಪು ಲಯನ್ಸ್ ಕ್ಲಬ್ಬಿನ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಪ್ರಾಂತ್ಯ ಅಧ್ಯಕ್ಷರಾದ ವರುಣ್ ಶೆಟ್ಟಿಯವರು ಕಾಪು ಲಯನ್ಸ್ ಕ್ಲಬ್ಬಿನ ವರದಿ ವಾಚಿಸಿದರು.
ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ, ಕ್ಯಾಬಿನೆಟ್ ಸೆಕ್ರೆಟರಿ ಗಿರೀಶ್ ರಾವ್, ವಲಯ ಅಧ್ಯಕ್ಷ ಮೇಲ್ವಿನ್ ಮ್ಯಾಕ್ಸಿಮ್ ಡಿಸೋಜಾ, ಎಲ್‌ಸಿಎಫ್ ಕೋಆರ್ಡಿನೇಟರ್ ಹರಿಪ್ರಸಾದ್ ರೈ, ಶೇಖರ್ ಶೆಟ್ಟಿ, ಚಾರ್ಟರ್ ಸದಸ್ಯ ಡಾ. ಗಂಗಾಧರ್ ಶೆಟ್ಟಿ, ನಾಗರಾಜ ರಾವ್ ಉಪಸ್ಥಿತರಿದ್ದರು.
ಅಧಕ್ಷ ಉದಯ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಶೆಟ್ಟಿ ವಂದಿಸಿದರು.