ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ನ 22ನೇ ವಾರ್ಷಿಕೋತ್ಸವ: ಸಹೋದರಿಯರ ಮದುವೆಗೆ ಧನಸಹಾಯ (Karnad Muslim Young Men’s Association’s 22nd anniversary: Funding for sisters’ weddings)

ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ನ 22ನೇ ವಾರ್ಷಿಕೋತ್ಸವ: ಸಹೋದರಿಯರ ಮದುವೆಗೆ ಧನಸಹಾಯ
(Mulki) ಮುಲ್ಕಿ: ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ನ 22ನೇ ವಾರ್ಷಿಕೋತ್ಸವದ ಪ್ರಯುಕ್ತ ಆಧ್ಯಾತ್ಮಿಕ ಮಜ್ಲಿಸ್ ನೂರೇ ಅಜ್ಮೀರ್ ಹಾಗೂ ಸಹೋದರಿಯರ ಮದುವೆಗೆ ಧನಸಹಾಯ ನೀಡುವ ಕಾರ್ಯಕ್ರಮ ಕಾರ್ನಾಡ್ ದರ್ಗಾ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಖತೀಬರಾದ ಇಸ್ಮಾಯಿಲ್ ದಾರಿಮಿ ಉದ್ಘಾಟಿಸಿದ ಬಳಿಕ ಮಾತನಾಡಿ, ಯುವ ಜನಾಂಗ ಸೇವಾ ಸಂಸ್ಥೆಗಳ ಮೂಲಕ ಸಹಾಯ ಹಸ್ತ ಕಾರ್ಯಕ್ರಮ ಅಭಿನಂದನೀಯವಾಗಿದೆ. ಸಂಘಟನೆ ಹಾಗೂ ಒಗ್ಗಟ್ಟು ಬಲಿಷ್ಠವಾಗಿ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಮುಖ್ಯ ಪ್ರಭಾಷಣಕಾರರಾಗಿ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಸುಹೈಲ್ ಹೈದರ್ ವಹಿಸಿದ್ದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಉಸ್ಮಾನಲ್ ಫೈಝಿ ತೋಡಾರ್, ಉಸ್ತಾದ್ ವಲಿಯುದ್ದಿನ್ ಫೈಝಿ ವಾಝಕ್ಕಾಡ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಆಲಿ, ಮುಲ್ಕಿ ನ.ಪಂ ಸದಸ್ಯ ಪುತ್ತುಬಾವ, ಯೂತ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಮಂಗಳೂರು ಉತ್ತರ ಯುವ ಕಾಂಗ್ರೆಸ್ ನ ಉಮ್ಮರ್ ಫಾರೂಕ್, ಉದ್ಯಮಿಗಳಾದ ಲತೀಫ್ ಗುರುಪುರ, ರಿಜ್ವಾನ್ ಬಪ್ಪನಾಡು, ಮುಲ್ಕಿ ತಾಲೂಕು ಸಂವಿಧಾನ ಹೋರಾಟ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಸಮಾಜ ಸೇವಕ ಎಚ್ ಕೆ ಆಶ್ರಫ್ ಕೋಡಿ, ಅಬ್ದುಲ್ ಹಮೀದ್ ಅಶ್ಕಾಫ್, ಎಚ್ ಕೆ ಪರ್ವೀಝ್ ಮಂಗಳೂರು, ಸುರತ್ಕಲ್ ಚೊಕ್ಕಬೆಟ್ಟು ಎಸ್ ವೈ ಎಸ್ ರೇಂಜ್ ನ ಮೊಹಮ್ಮದ್, ವಹಾಬ್ ಕುಳಾಯಿ, ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ನಿಸಾರ್ ಅಹಮದ್, ಕಲ್ನಾಡ್ ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷ ಬಶೀರ್ ಅಹ್ಮದ್, ಕಿಲ್ಪಾಡಿ ಹನಫಿ ಮಸೀದಿಯ ಅಧ್ಯಕ್ಷ ಮಹಮ್ಮದ್ ಅಬ್ದುಲ್ಲಾ, ಅಬ್ದುಲ್ ರಜಾಕ್ ಕರೀಂ ಉಚ್ಚಿಲ, ಉದ್ಯಮಿ ಎಎಚ್ ರಫೀಕ್, ಕೆರೆಕಾಡು ಸಾದಾತ್ ಮಾದಾರಿ ಫೌಂಡೇಶನ್ ಸಂಸ್ಥಾಪಕ ಮೊಹಮ್ಮದ್, ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ಅಧ್ಯಕ್ಷ ಅಲ್ಫಾಸ್ ಕಾರ್ನಾಡ್, ಜೊತೆ ಕಾರ್ಯದರ್ಶಿ, ಉಸೈನ್ ಕೇರಿ, ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ನಾಸೀರ್ ದರ್ಗಾ ರೋಡ್, ಸದರ್ ಉಸ್ತಾದ್ ಖಲೀಲ್ ದಾರಿಮಿ, ಅಬ್ದುಲ್ ರಜಾಕ್ ಮದನಿ ಗೇರುಕಟ್ಟೆ, ಮಸಾಕಿನ್ ಅಧ್ಯಕ್ಷ ಅಮನುಲ್ಲಾ, ಹಿಮಾಯತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ರಿಯಾಜ್ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಇರ್ಷಾದ್ ಕೆರೆಕಾಡು ಸ್ವಾಗತಿಸಿದರು. ನೌಫಲ್ ಕೆ. ಬಿ.ಎಸ್ ನಿರೂಪಿಸಿದರು.
ಬಳಿಕ ಆಧ್ಯಾತ್ಮಿಕ ಮಜ್ಲಿಸ್ ನೂರೇ ಅಜ್ಮೀರ್ ಹಾಗೂ ಸಹೋದರಿಯರ ಮದುವೆಗೆ ಧನಸಹಾಯ ನೀಡುವ ಕಾರ್ಯಕ್ರಮ ನಡೆಯಿತು.