# Tags
#social service

 ಕುರ್ಕಾಲು: ಕುರ್ಕಾಲು ಕುಲೆದು ನಿವಾಸಿ ಜಲಜರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ವಾತ್ಸಲ್ಯ ಮನೆಗೆ ಗುದ್ದಲಿ ಪೂಜೆ (Kurkalu: Guddali Puja for Jalaja, a resident of Kurkalu Kuledu, at the Vatsalya house sanctioned by Sri Kshetra Dharmasthala)

ಕುರ್ಕಾಲು: ಕುರ್ಕಾಲು ಕುಲೆದು ನಿವಾಸಿ ಜಲಜರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ವಾತ್ಸಲ್ಯ ಮನೆಗೆ ಗುದ್ದಲಿ ಪೂಜೆ

(Kurkalu) ಕುರ್ಕಾಲು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಾಪು ತಾಲೂಕಿನ ಕುರ್ಕಾಲು ನಿವಾಸಿ  ಜಲಜ ಪೂಜಾರಿಯವರು ಮಾಶಾಸನ ಫಲಾನುಭವಿಯಾಗಿದ್ದು, ಇವರಿಗೆ ವಾತ್ಸಲ್ಯ ಮನೆ ಮಂಜೂರು ಆಗಿದೆ.

ಮಾತೃಶ್ರೀ ವಾತ್ಸಲ್ಯಮಯಿ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುವ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಾಶಾಸನ ಪಡೆಯುತ್ತಿರುವ ಜಲಜ ಪೂಜಾರಿಯವರ ಕುಟುಂಬಕ್ಕೆ ಮನೆ ರಚನೆ ಸೌಲಭ್ಯದಡಿ ಗುದ್ದಲಿ ಪೂಜೆ ನೆರವೇರಿದೆ.

 ವಿನಯ್ ಭಟ್‌ರವರು ಗುದ್ದಲಿ ಪೂಜೆಯ ಧಾರ್ಮಿಕ ವಿಧಿಗಳನ್ನು ಪೂರೈಸಿ ಪ್ರಸಾದ ವಿತರಿಸಿದರು.

 ನೂತನ ಮನೆಗೆ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಕುರ್ಕಾಲು  ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕಾಪು  ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಜನಜಾಗ್ರತಿ ವೇದಿಕೆಯ ಸದಸ್ಯ ಸುದರ್ಶನ್ ರಾವ್, ಶೌರ್ಯ ಘಟಕದ ಸದಸ್ಯರು, ಊರಿನ ಗಣ್ಯರು, ವಲಯದ ಮೇಲ್ವಿಚಾರಕಿ  ಗೀತಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಸುನಂದ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3