# Tags
#ಅಪರಾಧ

ಕೋಟ: ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ (Kota: Student commits suicide by hanging her self)

ಕೋಟ: ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

(Kota) ಕೋಟ: ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗುರುವಾರ ಸಾಸ್ತಾನದ ಕುಂಬಾರಬೆಟ್ಟುವಿನಲ್ಲಿ ಸಂಭವಿಸಿದೆ.

 ಮೃತ ವಿದ್ಯಾರ್ಥಿನಿಯನ್ನು ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಅವರ ಪುತ್ರಿ ದಿಶಾ(16) ಎಂದು ಗುರುತಿಸಲಾಗಿದೆ.

 ವಿದ್ಯಾರ್ಥಿನಿ ದಿಶಾ ಮೊಬೈಲ್‌ ಹಿಡಿದುಕೊಂಡು ಕುಳಿತಿದ್ದ ಹಿನ್ನೆಲೆ, ದಿಶಾಳ ತಾಯಿ ಜೋರು ಮಾಡಿ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ದಿಶಾ ನೇರವಾಗಿ ಕೋಣೆಯ ಬಾಗಿಲು ಹಾಕಿಕೊಂಡಿದ್ದು, ತಾಯಿ ಜೋರು ಮಾಡಿ ಬಾಗಿಲು ತೆರೆಯಲು ಹೇಳಿದ್ದಾರೆ.

 ಎಷ್ಟು ಹೊತ್ತಾದರೂ ಬಾಗಿಲು ತೆರೆಯದೆ ಇರುವುದನ್ನು ಕಂಡ ತಾಯಿ, ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಮನೆಯ ಕಿಟಕಿಯ ಕಂಬಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಯತ್ನಿಸಿದ್ದು, ತಕ್ಷಣ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಜೀವನ್‌ಮಿತ್ರ ಅಂಬ್ಯುಲೆನ್ಸ್‌ನ ನಾಗರಾಜ್ ಪುತ್ರನ್ ಮತ್ತು ಕಿಶೋ‌ರ್ ಶೆಟ್ಟಿ ಬಾಲಕಿಯ ರಕ್ಷಣೆಗೆ ಪ್ರಯತ್ನಿಸಿದ್ದು, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ವಿದ್ಯಾರ್ಥಿನಿ ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಳು.

ಸ್ಥಳಕ್ಕೆ ಕೋಟ ಕ್ರೈಂ ಪಿಎಸ್‌ಐ ಸುಧಾ ಪ್ರಭು ಮತ್ತು ಎಎಸ್ಐ ರವಿ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

Emedia Advt3