ದೀಪಕ್ ನಾಯಕ್ ಅವರಿಗೆ ಪಿಎಚ್.ಡಿ. ಪದವಿ (Deepak Nayak gets Ph.D. degree)

ದೀಪಕ್ ನಾಯಕ್ ಅವರಿಗೆ ಪಿಎಚ್.ಡಿ. ಪದವಿ
(Udupi) ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE)ನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಲ್ಲಿ “ಕೋಸ್ಟಲ್ ಕರ್ನಾಟಕದ ಲಿಥೋಮಾರ್ಜಿಕ್ ಮಣ್ಣಿನ ಭೌತಿಕ ಹಾಗೂ ಖನಿಜ ಶಾಸ್ತ್ರೀಯ ಗುಣ ಲಕ್ಷಣಗಳ ಅಧ್ಯಯನ ಮತ್ತು ತೆಂಗಿನ ನಾರನ್ನು ಬಳಸಿ ಅದರ ಸುಧಾರಣೆ” ಎಂಬ ವಿಷಯದ ಕುರಿತಾಗಿ ಸಂಶೋಧನೆ ನಡೆಸಿ ದೀಪಕ್ ನಾಯಕ್ ಅವರು ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಈ ಸಂಶೋಧನೆ ಡಾ. ಪುರುಷೋತ್ತಮ್ ಜಿ ಸರ್ವದೆ ಮತ್ತು ಡಾ. ಎಚ್ ಎನ್ ಉದಯಶಂಕರ್, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ.
ದೀಪಕ್ ನಾಯಕ್ ಅವರು ಜ್ಯೋತಿ ಆರ್ ನಾಯಕ್ ಮತ್ತು ರಮಾನಾಥ್ ನಾಯಕ್ ಅವರ ಸುಪುತ್ರ.