# Tags
#ಧಾರ್ಮಿಕ #ವಿಡಿಯೋ

ಧರ್ಮಸ್ಥಳ ಒಕ್ಕೂಟ ವ್ಯವಸ್ಥೆಯಿಂದ ಆರ್ಥಿಕ ಸಬಲೀಕರಣ : ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್ (Economic empowerment through Dharmasthala federal system: Ratnakararaj Aras  Kinyakka Ballal)

ಧರ್ಮಸ್ಥಳ ಒಕ್ಕೂಟ ವ್ಯವಸ್ಥೆಯಿಂದ ಆರ್ಥಿಕ ಸಬಲೀಕರಣ : ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್

ಹೆಜಮಾಡಿಯಲ್ಲಿ ಗ್ರಾಮಾಭಿವೃದ್ಧಿ ಒಕ್ಕೂಟ ಪದಗ್ರಹಣ ಸಮಾರಂಭ

 (Hejamady) ಹೆಜಮಾಡಿ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆರ್ಥಿಕ ಸಬಲೀಕರಣ ನಡೆದಿದೆ. ಜತೆಗೆ ಒಕ್ಕೂಟ ವ್ಯವಸ್ಥೆಯು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಯಾವುದೇ ಅಪಪ್ರಚಾರಗಳಿಗೆ ಕಿವಿಕೊಡದಿರಿ ಎಂದು ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಹೇಳಿದರು.

ಹೆಜಮಾಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಪಡುಬಿದ್ರಿ ವಲಯದ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಶುಭ ನುಡಿದರು.

ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, 1982ರಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗೆ ಅಡಿಪಾಯ ಹಾಕಿದಾಗ ರೈತರ ಒಪ್ಪೊತ್ತಿನ ಊಟಕ್ಕೂ ಕಷ್ಟವಿತ್ತು. ಆ ಸಂದರ್ಭದಲ್ಲೇ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಅರಂಭಿಸಲಾಗಿತ್ತು. ಇದು ಮುಂದುವರಿಯುತ್ತಾ ಬಂದಿದೆ. ಧ. ಗ್ರಾ. ಯೋಜನೆಯು ರೈತರಿಗೆ ವರವಾಗಿ ಪರಿಣಮಿಸಿದೆ. ನಮ್ಮ ಸಂಘಗಳು ಸಶಕ್ತವಾಗಿದೆ. ಏಳು ಒಕ್ಕೂಟಗಳ ಪದಗ್ರಹಣ ಇಂದು ನಡೆದಿದೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದರು.

ಪದಗ್ರಹಣ: ಪಡುಬಿದ್ರಿ ವಲಯದ ನೂತನ ಅಧ್ಯಕ್ಷ ಭುಜಂಗ ಆಚಾರ್ಯರಿಗೆ ನಿರ್ಗಮನ ಅಧ್ಯಕ್ಷ ರಾಜೇಶ್ ದೇವಾಡಿಗ ಅಧಿಕಾರ ಹಸ್ತಾಂತರಿಸಿದರು. ಮಮತಾ ಶೆಟ್ಟಿ ಪದಗ್ರಹಣ ನಡೆಸಿದರು.

7 ಒಕ್ಕೂಟಗಳ ಅಧ್ಯಕ್ಷರುಗಳಾದ ಗಣೇಶ್(ಹೆಜಮಾಡಿ ಎ), ಆಶಾ ಪ್ರಾಣೇಶ್(ಹೆಜಮಾಡಿ ಬಿ), ಜಗದೀಶ್(ಅದಮಾರು), ಭುಜಂಗ ಅಚಾರ್ಯ (ಪಡುಬಿದ್ರಿ), ಬೇಬಿ (ನಂದಿಕೂರು), ಸುಮನಾ ಕಿಶೋರ್ (ತೆಂಕ ಎರ್ಮಾಳು) ಮತ್ತು ಶಂಶಾದ್ (ಕಂಚಿನಡ್ಕ) ರವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾ ಎ. ಮೆಂಡನ್ ಜವಾಬ್ದಾರಿ ಹಸ್ತಾಂತರಗೈದರು. ನಿರ್ಗಮನ ವಲಯಾಧ್ಯಕ್ಷ ರಾಜೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಯೋಜನೆಯ ಕಾಪು ತಾಲೂಕು ಕೇಂದ್ರ ಸಮಿತಿಯ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಡವರ, ಮಧ್ಯಮ ವರ್ಗದವರ ಏಳಿಗೆಗಾಗಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆ ನಮ್ಮ ಕೈಬಿಡದು ಎಂದರು. ಜನಜಾಗೃತಿ ವೇದಿಕೆಯ ಸದಸ್ಯ ಸುಧಾಕರ ಕರ್ಕೇರ ಮಾತನಾಡಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ದಯಾನಂದ ಹೆಜ್ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಮೋಹನ್ ಸುವರ್ಣ, ಜಿಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಲೋಕೇಶ್ ಅಮೀನ್, ಒಕ್ಕೂಟದ ನಿರ್ಗಮನ ಅಧ್ಯಕ್ಷರುಗಳಾದ ಪಾರ್ವತಿ, ಪವಿತ್ರಾ ಗಿರೀಶ್, ವೀಣಾ ಯತೀನ್, ಪದ್ಮನಾಭ ಆಚಾರ್ಯ, ತುಳಸಿ ವೇದಿಕೆಯಲ್ಲಿದ್ದರು.

ಪಡುಬಿದ್ರಿ ವಲಯದ ಮೇಲ್ವಿಚಾರಕಿ ಸರಿತಾ ಸ್ವಾಗತಿಸಿದರು. ಅದಮಾರು ಸೇವಾ ಪ್ರತಿನಿಧಿ ಪಾರ್ವತಿ ಸಾಧನಾ ವರದಿ ಮಂಡಿಸಿದರು. ಭವಾನಿ ವೈ. ಕಾರ್ಯಕ್ರಮ ನಿರ್ವಹಿಸಿದರು. ಪಡುಬಿದ್ರಿ ಸೇವಾ ಪ್ರತಿನಿಧಿ ಸುನೀತಾ ವಂದಿಸಿದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

Leave a comment

Your email address will not be published. Required fields are marked *

Emedia Advt3