# Tags
#Uncategorised #ವಿಡಿಯೋ

 ಧಾರ್ಮಿಕ ಕಾರ್ಯದ ಮೂಲಕ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಸಹಕಾರ – ಮುನಿಯಾಲು (Cooperation for construction of Parasurama Murthy through religious work – Muniyalu)  

ಧಾರ್ಮಿಕ ಕಾರ್ಯದ ಮೂಲಕ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಸಹಕಾರ – ಮುನಿಯಾಲು  

(Udupi) ಉಡುಪಿ: ಕಾರ್ಕಳ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಮಿಕಲ್ ಕುಂಜದಲ್ಲಿನ ಪರಶುರಾಮ ಮೂರ್ತಿಯನ್ನು ಸಂಪೂರ್ಣ ನಕಲಿ ಮಾಡಲಾಗಿದ್ದು, ಅದನ್ನು ಧಾರ್ಮಿಕತೆಯ ಮೂಲಕ ಪುನರ್ ನಿರ್ಮಾಣ ಮಾಡಲು ಜವಾಬ್ದಾರಿಯುತ ಸಂಘಗಳ ಮೂಲಕ ಪ್ರಯತ್ನ ಮಾಡಿದರೆ ಸರಕಾರದ ಮಟ್ಟದಲ್ಲಿ ಅಲ್ಲಿನ ಸ್ಥಳ ಮಂಜೂರು ಮಾಡಲು ಸಂಪೂರ್ಣ ಪ್ರಯತ್ನ ಮಾಡುವೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪತ್ರಕರ್ತ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

 ಪರಶುರಾಮರ ಮೂರ್ತಿ ಕಾರ್ಕಳದಲ್ಲಿ ನಿರ್ಮಾಣ ಆಗುತ್ತದೆ ಎಂದಾಗ ನಾನು ಬಹಳ ಸಂತಸ ಪಟ್ಟಿದ್ದೆ. ಆದರೆ ಪರಶುರಾಮರ ಮೂರ್ತಿಯನ್ನು ಫೈಬರ್‌ನಿಂದ ಮಾಡುವ ಮೂಲಕ ಧಾರ್ಮಿಕತೆಗೆ ಅಪಚಾರ ಮಾಡಲಾಯಿತು. ಪ್ರವಾಸೋದ್ಯಮ ಎಂದು ಜನರನ್ನು ನಂಬಿಸಿ ಗೋ ಮಾಳ ಜಾಗವನ್ನು ಯಾವುದೇ ಮಂಜೂರಾತಿ ಇಲ್ಲದೆ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ನೀಡಲಾಯಿತು.

  ಪರಶುರಾಮ ಮೂರ್ತಿಯನ್ನು ನಕಲಿ ಮಾಡುವ ಮೂಲಕ ಕೆಲಸ ವಿಶ್ವ ಮಟ್ಟದಲ್ಲಿ ಕಾರ್ಕಳದ ಮಾನ ಕಳೆಯಲಾಗಿದೆ.

 ಆಗಿನ ಸಚಿವ ಸುನಿಲ್ ಕುಮಾರವರ ಒತ್ತಡಕ್ಕೆ ಹೆದರಿದ ಅಧಿಕಾರಿಗಳು ಈ ಫೈಬರ್ ಮೂರ್ತಿ ನಿರ್ಮಾಣಕ್ಕೆ ಗೋಮಾಳ ಸ್ಥಳವನ್ನೇ ನೀಡಿದ್ದಾರೆ. ಇದು ಧಾರ್ಮಿಕತೆಯಲ್ಲಿ ಬಹಳ ನೋವಿನ ವಿಚಾರ. ಸಚಿವರ ಆರ್ಭಟಕ್ಕೆ ಅಧಿಕಾರಿ ಹಾಗೂ ಶಿಲ್ಪಿಯ ತಲೆ ದಂಡ ಆಗಿರುವುದು ಬಹಳ ನೋವಿನ ವಿಚಾರ.

 ಯಾವುದೇ ಒಂದು ಕೆಲಸ ಆಗಬೇಕಾದರೂ ಕೂಡ ಪೂಜೆ ಪುನಸ್ಕಾರ ಮಾಡಬೇಕಾದುದು ಧರ್ಮ. ಆದರೆ ಉಮಿಕಲ್ ಕುಂಜದಲ್ಲಿ ದೈವಗಳು ನೆಲೆಸಿದ್ದಾರೆ. ಕೋಟಿ ಚೆನ್ನಯರ ಪಾದಗಳು ಇವೆ ಎಂಬ ಹಿರಿಯರ ಮಾತಿಗೆ ಮನ್ನಣೆ ನೀಡದೆ, ಅಲ್ಲಿನ ಬೃಹತ್ ಕಲ್ಲನ್ನು ಒಡೆದು ತೆಗೆಯಲಾಗಿದೆ. ಮೂರ್ತಿ ನಿಲ್ಲಿಸುವ ಸಮಯದಲ್ಲಿ ಹಲವಾರು ಸಮಸ್ಯೆ ಬಂದಿದ್ದು, ಅಲ್ಲಿನ ಸ್ಥಳ ವಿಶೇಷ ತಿಳಿದವರಿಗೆ ಮಾತ್ರ ಗೊತ್ತು. ಹೀಗಾಗಿ ಆ ಯೋಜನೆಯಿಂದ ಧರ್ಮ, ಆಚರಣೆ, ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಈ ಮೂರ್ತಿ ಪುನರ್ ನಿರ್ಮಾಣ ಆಗಬೇಕು. ಅದು ಕೂಡ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು, ಮೂರ್ತಿ ನಿರ್ಮಾಣ ಕಾರ್ಯ ಪ್ರತಿಷ್ಠೆ ಆಗಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

Leave a comment

Your email address will not be published. Required fields are marked *

Emedia Advt3