ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri: Case registered against railway employee who beat up two boys on charges of stealing iron clips near Palimaru railway tracks)

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು
(Padubidri) ಪಡುಬಿದ್ರಿ, ಫೆ.17: ಪಲಿಮಾರು ಅವರಾಲಿನಲ್ಲಿ ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪದಲ್ಲಿ ಶಾಲಾ ಬಾಲಕರಿಬ್ಬರಿಗೆ ಹಲ್ಲೆ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿರುವ ಕೊಂಕಣ ರೈಲ್ವೇ ನೌಕರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ ಸ್ಕೂಟಿಯಲ್ಲಿ ತೆರಳಿದ್ದ. ಫೆ.15ರಂದು ಮಧ್ಯಾಹ್ನದ ವೇಳೆಗೆ ಇವರಿಬ್ಬರು ಆಟ ಆಡುತ್ತ ರೈಲು ಹಳಿಯ ಬಳಿ ದೊರೆತ ಕಬ್ಬಿಣದ ತುಂಡನ್ನು ಹೆಕ್ಕಿದ್ದರು.ಇದನ್ನು ಕಂಡ ಗ್ಯಾಂಗ್‌ಮ್ಯಾನ್ ಬಾಲಕರನ್ನು ಹಿಡಿದು, ಕೋಲಿನಿಂದ ಒಬ್ಬನ ತಲೆಗೆ ಹಾಗೂ ಮತ್ತೋರ್ವನ ಕಾಲಿಗೆ ಹೊಡೆದಿದ್ದಾನೆ. ಅಲ್ಲದೆ ಇಡೀ ಘಟನೆಯ ವೀಡಿಯೋ ಮಾಡಿ, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ, ತನಿಖೆ ನಡೆಸುತ್ತಿದ್ದಾರೆ.