# Tags
#ವಿಡಿಯೋ #ಸಂಘ, ಸಂಸ್ಥೆಗಳು

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ : ಅಧ್ಯಕ್ಷರಾಗಿ ವೈ.ಸುಧೀರ್ ಕುಮಾರ್, ಉಪಾಧ್ಯಕ್ಷರಾಗಿ ಗುರುರಾಜ್ ಪೂಜಾರಿ ಅವಿರೋಧ ಆಯ್ಕೆ(Padubidri Cooperative Society: Y.Sudhir Kumar elected as President, Gururaj Pujary as Vice President elected unopposed)

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ : ಅಧ್ಯಕ್ಷರಾಗಿ ವೈ.ಸುಧೀರ್ ಕುಮಾರ್, ಉಪಾಧ್ಯಕ್ಷರಾಗಿ ಗುರುರಾಜ್ ಪೂಜಾರಿ ಅವಿರೋಧ ಆಯ್ಕೆ

 (Padubidri) ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವೈ. ಸುಧೀರ್ ಕುಮಾರ್, ಉಪಾಧ್ಯಕ್ಷರಾಗಿ ಗುರುರಾಜ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಮಂಗಳವಾರ ಸೊಸೈಟಿಯ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

  ಚುನಾವಣಾ ನಿರ್ವಚನಾಧಿಕಾರಿಯಾಗಿ ಸುನಿಲ್ ಕುಮಾರ್ ಸಿ. ಎಂ. ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.

 ಅಧ್ಯಕ್ಷರಾಗಿ ಆಯ್ಕೆಯಾದ ವೈ ಸುಧೀರ್ ಕುಮಾರ್  ಅವರು ಕಳೆದ 20 ವರ್ಷಗಳಿಂದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ವೈ ಸುಧೀರ್ ಕುಮಾರ್, ಸೊಸೈಟಿಯು 4 ಕೋಟಿ ಠೇವಣಾತಿಯಿಂದ 140 ಕೋಟಿ  ಠೇವಣಾತಿ ಹೊಂದಿದ್ದು, ಮುಂದೆ 200 ಕೋಟಿಯ ಗುರಿಯನ್ನು ಹೊಂದಿದೆ. ಚುನಾವಣೆ ಗೆಲುವಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

 ಆಡಳಿತ ಮಂಡಳಿ ನಿರ್ದೇಶಕರಾಗಿ ಜಿತೇಂದ್ರ ಫುರ್ಟಾಡೊ,  ಮಾಧವ ಆಚಾರ್ಯ, ವಾಸುದೇವ,  ರಾಜಾರಾಮ ರಾವ್, ಹಸನ್ ಬಾವ, ರೋಹಿಣಿ ಎ., ಕುಸುಮಾ ಕರ್ಕೇರ, ಗಿರೀಶ್ ಫಲಿಮಾರು, ಶಿವರಾಮ ಎನ್ ಶೆಟ್ಟಿ, ಕೃಷ್ಣ ಬಂಗೇರ, ಕಾಂಚನಾ ಆಯ್ಕೆಯಾಗಿದ್ದಾರೆ. 

ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ್ ಬಲ್ಲಾಳ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಶ್ಮಿತ ಪಿ. ಎಚ್. ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3