# Tags
#ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆ “ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ಬಹುಮಾನ (SMVITM MBA Students Win Overall Championship at Ascendant National Level B-School Fest)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆರಾಷ್ಟ್ರ ಮಟ್ಟದ ಬಿಸ್ಕೂಲ್ಸ್ಪರ್ಧೆಯಲ್ಲಿ ಬಹುಮಾನ

(Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ  “ಅಸೆಂಡೆಂಟ್” ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್ ಶಿಪ್ ಆಫ್ ಟ್ರೋಪಿ ಪಡೆದಿದ್ದಾರೆ.

 ಇಲ್ಲಿಯ ವಿದ್ಯಾರ್ಥಿಗಳಾಧ ರೋನನ್ ಥೋಮಸ್ ಸಲ್ದಾನಾ, ಶೆಟ್ಟಿ ಸ್ವಸ್ತಿಕ್ ಸುರೇಶ್, ರಕ್ಷಾ ಸುಬ್ರಹ್ಮಣ್ಯ ಶೆಟ್ಟಿ, ನವ್ಯಾ ಎನ್ ಬಲ್ಲಾಳ್, ಮೇಘಾ, ಅರ್ವಿನ್‌  ಮೆನೆಜೆಸ್ ಮತ್ತು ಜಯಶ್ರೀ ಹನುಮಪ್ಪ ಕಡ್ಲಿಮಟ್ಟಿ ಇವರು ಮಣಿಪಾಲ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ “ಅಸೆಂಡೆಂಟ್” ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್ ಶಿಪ್ ಆಫ್ ಟ್ರೋಪಿಯನ್ನು ಪಡೆದಿರುತ್ತಾರೆ.

 ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಪಠ್ಯೇತರ ಚಟುವಟಿಕೆಯ ಸಂಯೋಜಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

Emedia Advt3