# Tags
#ಸಂಘ, ಸಂಸ್ಥೆಗಳು

ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸರಕಾರಕ್ಕೆ ಒತ್ತಾಯ (Global Federation of Bunt Associations urges government to establish Bunt Development Corporation)

ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸರಕಾರಕ್ಕೆ ಒತ್ತಾಯ

(Mangaluru) ಮಂಗಳೂರು: ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸರಕಾರವನ್ನು ಒತ್ತಾಯಿಸಿದೆ.

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಇರುವ ಬಂಟರ ಸಮುದಾಯವು ಒಟ್ಟು ಜನಸಂಖ್ಯೆ ಶೇಕಡಾ 60 ಮಂದಿ ಬಡತನ ರೇಖೆಯಲ್ಲಿದ್ದು, 30 ಶೇಕಡಾ ಮಧ್ಯಮ ವರ್ಗದಲ್ಲಿದ್ದು, ಕೇವಲ 10 ಶೇಕಡಾ ಜನರು ಸಿರಿವಂತರಾಗಿದ್ದಾರೆ.

ಈ ಬಂಟ ಸಮುದಾಯ ಕಡಿಮೆ ಜನರು ಇರುವ ಒಂದು ವಿಶಿಷ್ಟ ಜಾತಿಯಾಗಿದ್ದು, ತೀರ ಕೆಳಸ್ತರದ ಮಂದಿಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶ ನಮ್ಮದಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

 ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರಲು  ಸರಕಾರದ  ಸಂಪೂರ್ಣ ಸಹಾಯ ಇದ್ದಲ್ಲಿ ಮಾತ್ರ ಸಾಧ್ಯ. ಅದಕ್ಕಾಗಿ ಕರ್ನಾಟಕ ಘನ ಸರಕಾರ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಿ ಮುಂದಿನ ದಿನಗಳಲ್ಲಿ ಬಡ ಬಂಟರ ಉನ್ನತೀಕರಣ ಮಾಡಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಹಕ್ಕೊತ್ತಾಯ ಮಾಡುತ್ತಿದೆ ಎಂದು  ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪದಾಧಿಕಾರಿಗಳು, ಜಾಗತಿಕ ಬಂಟರ ಸಂಘಗಳ ಒಕ್ಕೂಟ  ಮಂಗಳೂರು ತಿಳಿಸಿದೆ.

Leave a comment

Your email address will not be published. Required fields are marked *

Emedia Advt3