ಬೆಳ್ಳೆ ಕಟ್ಟಿಂಗೇರಿ: ಲಾರಿ ಪಲ್ಟಿ, ಚಾಲಕ ಸಾವು(Belle Kattingeri: Lorry overturns, driver dies)

ಬೆಳ್ಳೆ ಕಟ್ಟಿಂಗೇರಿ: ಲಾರಿ ಪಲ್ಟಿ, ಚಾಲಕ ಸಾವು
(Belfle) ಬೆಳ್ಳೆ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಗಣಪಣಕಟ್ಟೆ ಬಳಿ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಧಾರುಣವಾಗಿ ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಬೆಳ್ಳೆ ಗ್ರಾಪಂ ಪಂಚಾಯತ್ ಸದಸ್ಯರಾದ ಗುರುರಾಜ್ ಭಟ್, ಸುಧಾಕರ ಪೂಜಾರಿ, ಕೃಷ್ಣ ಆಚಾರ್ಯ ಹಾಗೂ ಶಿರ್ವ ಪೊಲೀಸ್ ಸಿಬ್ಬಂದಿಯವರ ಸಹಕಾರದಲ್ಲಿ ಜೆಸಿಬಿಯ ಮೂಲಕ ಮೂಲಕ ಲಾರಿ ಯನ್ನು ಎತ್ತಿ ಚಾಲಕನ ಮೃತ ದೇಹವನ್ನು ಹೊರತೆಗೆಯಲಾಯಿತು.
ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.