ಮಣಿಪಾಲ ಸರಣಿ ಅಪಘಾತ : ಸಿನಿಮೀಯ ಶೈಲಿಯಲ್ಲಿ ಪರಾರಿ ಆಗಲೆತ್ನಿಸಿದ ಆರೋಪಿಯ ಬಂಧನ (Manipal serial accident: Accused arrested for trying to escape in cinematic style)

ಮಣಿಪಾಲ ಸರಣಿ ಅಪಘಾತ : ಸಿನಿಮೀಯ ಶೈಲಿಯಲ್ಲಿ ಪರಾರಿ ಆಗಲೆತ್ನಿಸಿದ ಆರೋಪಿಯ ಬಂಧನ
(Manipala) ಮಣಿಪಾಲ: ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬ ರಾದ್ಧಾಂತ ನಡೆಸಿ ಸರಣಿ ಅಪಘಾತಕ್ಕೆ ಕಾರಣನಾಗಿ̧ದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಎಂದು ತಿಳಿದುಬಂದಿದೆ.
ಆರೋಪಿ ಇಸಾಕ್ ಮಣಿಪಾಲದಲ್ಲಿ ಪೊಲೀಸರನ್ನು ನೋಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಾಲ್ಕು ಕಾರು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಆರೋಪಿಯ ಕಾರು ಡಿಕ್ಕಿಯಾಗಿದೆ.
ಪ್ರಕರಣವೊಂದರ ಸಂಬಂಧ ಆರೋಪಿಯನ್ನು ಬಂಧಿಸಲು ನೆಲಮಂಗಲ ಪೊಲೀಸರು ಬಂದಿದ್ದರು. ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ. ಆರೋಪಿಯನ್ನು ಬೆಂಬಿಡದೆ ಚೇಸ್ ಮಾಡಿದ ನೆಲಮಂಗಲ ಪೊಲೀಸರು, ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್, ಆರೋಪಿಯನ್ನು ಚೇಸ್ ಮಾಡಿ ಮಣ್ಣಪಳ್ಳದ ಬಳಿ ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.