ಮಣಿಪುರ ದೆಂದೂರುಕಟ್ಟೆ: ಕಾಪು ಶಾಸಕರಿಂದ ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ ( Manipura Dendurukatte: New rickshaw stand inaugurated by Kapu MLA

ಮಣಿಪುರ ದೆಂದೂರುಕಟ್ಟೆ: ಕಾಪು ಶಾಸಕರಿಂದ ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ
(Manipura) ಮಣಿಪುರ : ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ, ದೆಂದೂರುಕಟ್ಟೆ ಮಣಿಪುರ ಇದರ ನೂತನ ರಿಕ್ಷಾ ನಿಲ್ದಾಣವನ್ನು ಭಾನುವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿ ಯಶೋಧ ಆಟೋ ಯೂನಿಯನ್ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ದೆಂದೂರುಕಟ್ಟೆ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ ದೆಂದೂರು, ಅಧ್ಯಕ್ಷ ಅಶೋಕ್ ಶೆಟ್ಟಿ ದೆಂದೂರುಕಟ್ಟೆ, ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೈತ್ರಾ, ಉಪಾಧ್ಯಕ್ಷ ಜಾನ್ ಸಿಕ್ವೇರ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಶೆಟ್ಟಿ, V4 ಡೆವಲಪರ್ಸ್ನ ಕಾರ್ತಿಕ್ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿದ್ದರು.