# Tags
#fastival

ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ಉತ್ಸವ- ಬ್ರಹ್ಮ ರಥೋತ್ಸವ (Mundkuru Sri Durgaparameshwari Temple Brahma Rathotsava)

ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ಉತ್ಸವ- ಬ್ರಹ್ಮ ರಥೋತ್ಸವ

(Mundkuru) ಮುಂಡ್ಕೂರು: ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ವರ್ಷಾವಧಿ ನಡೆಯುವ ಹಗಲು  ಬ್ರಹ್ಮ ರಥೋತ್ಸವ ಕ್ಷೇತ್ರದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯರ ನೇತೃತ್ವದಲ್ಲಿ ಎಡಪದವು ನಾರಾಯಣ ತಂತ್ರಿಗಳ ಪೌರಹಿತ್ಯದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

 ಬೆಳಿಗ್ಗೆ ಕಲಶಾಭಿಷೇಕ ಪೂರ್ವಾಹ್ನ 11 ಗಂಟೆಗೆ ಮಹಾಪೂಜೆ, ದೇವರ ಉತ್ಸವ ಬಲಿಮೂರ್ತಿ ಪೂಜೆ, ದೇವರ ರಥಾರೋಹಣ, ಹಗಲು ರಥೋತ್ಸವ ಪಲ್ಲಪೂಜೆ, ಮಹಾ ಅನ್ನ ಸಂತರ್ಪಣೆ ನೆರವೇರಿತು.

 ಈ ಸಂದರ್ಭದಲ್ಲಿ ದೇವಳದ ಪವಿತ್ರ ಪಾಣಿ ವೇದಮೂರ್ತಿ ರಾಮ ಮಡ್ಮಣ್ಣಾಯ, ದೇಗುಳದ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ. ರಾವ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಂದ್ರ ಎಸ್ . ಶೆಟ್ಟಿ ಕೋರಿಬೆಟ್ಟು ಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಜಾತ ಸುಭೋಧ್ ಶೆಟ್ಟಿ ಸಚ್ಚೇರಪರಾರಿ, ಅಕ್ಷತಾ ವಿಶ್ರಿ ತ್ ಶೆಟ್ಟಿ, ಜಗದೀಶ್ ಶೆಟ್ಟಿ ನಡಿಗುತ್ತು, ಶೇಖರ್ ಶೆಟ್ಟಿ ಮಾಣೆಬೆಟ್ಟು, ಕೃಷ್ಣ ಪೂಜಾರಿ ಬಂಟ್ರೋಟ್ಟು, ಸುರೇಶ ಸಾಲಿಯಾನ್ ಅಲಂಗಾರ್, ನಳಿನಾಕ್ಷಿ ರಾಜು ಸೇರಿಗಾರ ಕಡಪು ಕರಿಯ ಮುಂಡ್ಕೂರು ಮುಲ್ಲಡ್ಕ, ಇನ್ನಾ- ಮುಡ್ಕೂರು  ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 ಸಂಜೆ ಬ್ರಹ್ಮರಥದಲ್ಲಿ ಹೂವಿನ ಪೂಜೆ ರಾತ್ರಿ ರಥೋತ್ಸವ ನಡೆಯಲಿದೆ.

Leave a comment

Your email address will not be published. Required fields are marked *

Emedia Advt3