ಮುಲ್ಕಿ: ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 16 ನೇ ವಾರ್ಷಿಕೋತ್ಸವ (Mulki: 16th anniversary of the Sri Jarandaya Dhoomavati Youth Club, Kolachikambala)

ಮುಲ್ಕಿ: ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 16 ನೇ ವಾರ್ಷಿಕೋತ್ಸವ
(Mulki) ಮುಲ್ಕಿ: ತುಳುನಾಡು ದ್ಯೆವ, ದೇವರುಗಳ ನೆಲೆ ಬೀಡಾಗಿದ್ದು, ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡಲ್ಲಿ ನಮ್ಮ ಮನಸ್ಸಿನಲ್ಲಿ ಕೂಡ ಸ್ವಚ್ಚತೆ ಮೂಡಲು ಸಾಧ್ಯವೆಂದು ವಿದ್ವಾನ್ ಕೃಷ್ಣರಾಜ್ ಎನ್. ಭಟ್ ಬಪ್ಪನಾಡು ಹೇಳಿದರು.
ಕೊಳಚಿಕಂಬಳದ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಜರಗಿದ ಮೂಲ್ಕಿಯ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಸೇವಾ ಸಮಿತಿಯ ಅಂಗ ಸಂಸ್ಥೆ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 16 ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶುಭಾಶಂಸನೆಗ್ಯೆದು ಅವರು ಮಾತನಾಡಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘ (ರಿ.) ನ ಅಧ್ಯಕ್ಷ ವಾಮನ್ ಕೋಟ್ಯಾನ್ ವಹಿಸಿದ್ದರು.
ಕಾರ್ಯಕ್ರಮವನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗ್ಯೆದ ವಿದ್ಯಾ ರತ್ನ ಪ್ರಶಸ್ತಿ ಪುರಸ್ಕೃತೆ ಹೆಜಮಾಡಿ ಶಾಲೆಯ ಪ್ರಾಂಶುಪಾಲೆ ರಾಜೇಶ್ವರಿ ಎಸ್ ಕರ್ಕೇರರನ್ನು ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೊಳಚಿಕಂಬಳ ಸಾನದ ಮನೆಯ ವತಿಯಿಂದ ಸಾಧನೆಗ್ಯೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ವಾರ್ಷಿಕೋತ್ಸವ ಪ್ರಯುಕ್ತ ಜರಗಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಲಯನ್ಸ್ ಕ್ಲಬ್, ಮೂಲ್ಕಿಯ ಅಧ್ಯಕ್ಷ ರೋಲ್ಪಿ ಡಿ ಕೋಸ್ತ,ಬಿಲ್ಲವ ಸಂಘ (ರಿ.) ಹೆಜಮಾಡಿಯ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ವಿಜಯಾ ರೈತರ ಸೇವಾ ಸಹಕಾರಿ ಸಂಘ ನಿ., ಮೂಲ್ಕಿಯ ಅಧ್ಯಕ್ಷ ರಂಗನಾಥ ಶೆಟ್ಟಿ, ಬಿರುವೆರ್ ಕುಡ್ಲ (ರಿ.), ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಸ್ವಯಂಭೂಲಿಂಗೇಶ್ವರ ಕ್ಷೇತ್ರ, ದೊಡ್ಡಿಕಟ್ಟ, ಬಜಪೆಯ ಅಧ್ಯಕ್ಷ ಲೋಕೇಶ್ ಆರ್. ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೊಳಚಿಕಂಬಳ ಶ್ರೀ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ, ಊರಿನ ಗುರಿಕಾರರಾದ ಹರೀಶ್ಚಂದ್ರ ಪಿ ಸಾಲ್ಯಾನ್, ಪ್ರಾಣೇಶ್ ಪೂಜಾರಿ ಹೆಜಮಾಡಿ,ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ ಅಧ್ಯಕ್ಷ ಜೀವನ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕೋಟ್ಯಾನ್,ಕೋಶಾದಿಕಾರಿ ಪ್ರಫುಲ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಶೇಖರ್, ಕೊಳಚಿಕಂಬಳ ಸಾನದ ಮನೆ ಕೃಷ್ಣ ಆರ್ ಕೋಟ್ಯಾನ್ ಮತ್ತಿತರರಿದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಮಹಿಳೆಯರಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆನಕ ಆರ್ಟ್ಸ್ ಕುಡ್ಲ ಅರ್ಪಿಸುವ ಪೊರಿಪುದಪ್ಪೆ ಜಲದುರ್ಗೆ ಚಿತ್ರಾಪುರದ ಸತ್ಯ ಕಥಾ ಆಧಾರಿತ ತುಳು ಪೌರಾಣಿಕ ನಾಟಕ ಪ್ರದರ್ಶನ ಜರಗಿತು.
ಕೊಳಚಿಕಂಬಳ ಶ್ರೀ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ ಸ್ವಾಗತಿಸಿದರು. ಹರೀಶ್ಚಂದ್ರ ಪಿ ಸಾಲ್ಯಾನ್ ಪ್ರಸ್ತಾವನೆಗೈದರು. ಲತಾ ಶೇಖರ್ ವಂದಿಸಿದರು.
ಡಿ ಜೆ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.