ಮುಲ್ಕಿ : ಸೀರೆ ಗೊಂಡೆ ಹಾಕುವ ತರಬೇತಿ ಕಾರ್ಯಕ್ರಮ(Mulki: Saree draping training program)


ಮುಲ್ಕಿ : ಸೀರೆ ಗೊಂಡೆ ಹಾಕುವ ತರಬೇತಿ ಕಾರ್ಯಕ್ರಮ
(Mulki) ಮುಲ್ಕಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮುಲ್ಕಿ ಶಾಂಭವಿ ಸಂಜೀವಿನಿ ಒಕ್ಕೂಟ, ಬಿಲ್ಲವ ಸಮಾಜ ಸೇವಾ ಸಂಘ ಸಹಯೋಗದೊಂದಿಗೆ ಸೀರೆ ಗೊಂಡೆ ಹಾಕುವ ತರಬೇತಿ ಕಾರ್ಯಕ್ರಮ ಮುಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಇಓ ವಿಶ್ವನಾಥ ರೈ ಉದ್ಘಾಟಿಸಿದರು.
ಅವರು ಮಾತನಾಡಿ, ಮಹಿಳೆಯರು ಶಿಬಿರಗಳ ಪ್ರಯೋಜನ ಪಡೆದು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಜೀವನದಲ್ಲಿ ಸಾಧಕರಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ ವಹಿಸಿ ಮಾತನಾಡಿ, ಒಕ್ಕೂಟದ ವತಿಯಿಂದ ಗ್ರಾಮೀಣ ಭಾಗದಲ್ಲಿ ಅನೇಕ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿದ್ದು, ಜನರ ಪ್ರೋತ್ಸಾಹವಿರಲಿ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಅತಿಕಾರಿಬೆಟ್ಟು ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಮುಲ್ಕಿ ಬ್ಯಾಂಕ್ ಆಫ್ ಬರೋಡಾದ ಹಿರಿಯ ಪ್ರಬಂಧಕ ಸಚಿನ್ ಹೆಗ್ಡೆ, ಡಿಪಿಎಂ ಎನ್ ಆರ್ ಎಲ್ ಎಂ ಶಕುಂತಲಾ, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ನ ಜೀವನ್ ಕೊಲ್ಯ, ಮತ್ತಿತರರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಶುಭಲಕ್ಷ್ಮಿ ಮಾಹಿತಿ ನೀಡಿದರು.
ಸತ್ಯಾ ಶೆಟ್ಟಿ ಅತಿಕಾರಿಬೆಟ್ಟು ಧನ್ಯವಾದ ಅರ್ಪಿಸಿದರು. ಪ್ರೀತಿಕಾ ಕಿಲ್ಪಾಡಿ ನಿರೂಪಿಸಿದರು.
ಬಳಿಕ ಸೀರೆ ಗೊಂಡೆ ಹಾಕುವ ತರಬೇತಿ ಕಾರ್ಯಕ್ರಮ ನಡೆಯಿತು.