ಮುಲ್ಕಿ: ಹೆದ್ದಾರಿ ಸೂಚನಾ ಫಲಕಕ್ಕೆ ಓಮ್ನಿ ಡಿಕ್ಕಿಯಾಗಿ ಪಲ್ಟಿ; ನಾಲ್ವರು ಪವಾಡ ಸದೃಶ ಪಾರು (Mulki: Omni overturns after hitting highway signboard; four miraculously escape)

ಮುಲ್ಕಿ: ಹೆದ್ದಾರಿ ಸೂಚನಾ ಫಲಕಕ್ಕೆ ಓಮ್ನಿ ಡಿಕ್ಕಿಯಾಗಿ ಪಲ್ಟಿ; ನಾಲ್ವರು ಪವಾಡ ಸದೃಶ ಪಾರು
(Mulki) ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಮುಲ್ಕಿ ಸಮೀಪದ ಕೋಲ್ನಾಡು ಕಿರು ಸೇತುವೆ ಬಳಿ ಹೆದ್ದಾರಿ ಸೂಚನಾ ಫಲಕಕ್ಕೆ ಓಮ್ನಿ ಡಿಕ್ಕಿಯಾಗಿ ಪಲ್ಟಿಯಾಗಿ̧ದ್ದು ಓಮ್ನಿಯಲ್ಲಿದ್ದ ಬಂಟ್ವಾಳ ಸಜಿಪ ಮೂಲದ ನಾಲ್ವರು ಪವಾಡ ಸದೃಶ ಪಾರಾಗಿದ್ದಾರೆ
ಕಟಪಾಡಿಯಿಂದ ಕಂಬಳ ಮುಗಿಸಿ ವಾಪಸಾಗುತ್ತಿದ್ದ ವೇಳೆ ಮುಲ್ಕಿ ಸಮೀಪದ ಕೋಲ್ನಾಡು ಕಿರು ಸೇತುವೆ ಬಳಿ ಓಮ್ನಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಕಬ್ಬಿಣದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದಿಂದ ಓಮ್ನಿ ನಜುಗುಜ್ಜಾಗಿದ್ದು, ಅದರಲ್ಲಿದ್ದ ನಾಲ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.
ಈ ಸಂದರ್ಭ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು, ಕೂಡಲೇ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಓಮ್ನಿಯನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ಅಪಘಾತದ ಗಾಯಾಳುಗಳ ಮಾಹಿತಿ ಇನ್ನಷ್ಟು ತಿಳಿದು ಬರಬೇಕಾಗಿದೆ.