# Tags
#health

ಮೂಲ್ಕಿಯಲ್ಲಿ ಮಾ. 17 ರಿಂದ 23ರ  ತನಕ ಬೃಹತ್ ಸಾಮೂಹಿಕ ಬೃಹತ್ ಪ್ರಾಣಾಯಾಮ ಯೋಗ ಶಿಬಿರ (Massive mass Pranayama Yoga Camp in Mulki from Mar. 17 to 23)

FILE PHOTO

ಮೂಲ್ಕಿಯಲ್ಲಿ ಮಾ. 17ರಿಂದ 23ರ  ತನಕ ಬೃಹತ್ ಸಾಮೂಹಿಕ ಬೃಹತ್ ಪ್ರಾಣಾಯಾಮ ಯೋಗ ಶಿಬಿರ

(Mulki) ಮೂಲ್ಕಿ,ಮಾ.10: ನಗರ ಪಂಚಾಯತ್ ಮೂಲ್ಕಿ   ಹಾಗೂ ಮೂಲ್ಕಿ ತಾಲೂಕಿನ ವಿವಿಧ ಸ್ಥಳೀಯಾಡಳಿತಗಳು ಹಾಗೂ ಸಮಾಜ ಸೇವಾ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಮಾ. 17ರಿಂದ ಮಾ.23ರವರೆಗೆ ಕೆಂಚನಕೆರೆಯ ಪತಂಜಲಿ ಯೋಗ ಕೇಂದ್ರದ ಯೋಗ ಗುರು ಜಯ ಮುದ್ದು ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಉಚಿತವಾಗಿ ಏಳು ದಿನಗಳ ಕಾಲ  ಕಾರ್ನಾಡು ಗಾಂಧಿ ಮೈದಾನದಲ್ಲಿ ಬೆಳ್ಳಿಗ್ಗೆ 5 ರಿಂದ 6-30 ರ ತನಕ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 ಶಿಬಿರದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಕುಳಿತುಕೊಳ್ಳುವಲ್ಲಿ ಬೆಡ್ ಶೀಟ್ ಅಥವಾ ಯೋಗ ಮ್ಯಾಟ್‌ನ್ನು ತರುವುದು ಹಾಗೂ ಯೋಗ ಮಾಡಲು ಸಹಾಯವಾಗುವ ಉಡುಪು ಧರಿಸಿ ಬರುವಂತೆ ಕೋರಲಾಗಿದೆ.

ಕಾರ್ಯಕ್ರಮ ಸರಿಯಾದ ಸಮಯದಲ್ಲಿ ಆರಂಭಗೊಂಡು ಸರಿಯಾದ ಸಮಯಕ್ಕೆ ನಿತ್ಯವೂ ಮುಗಿಯಲಿದೆ.

 ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.

Leave a comment

Your email address will not be published. Required fields are marked *

Emedia Advt3