# Tags
#ಅಪಘಾತ

ಮೂಳೂರು : ಅಪರಿಚಿತ ವಾಹನ ಡಿಕ್ಕಿ, ಯುವಕ ಸಾವು ಮತ್ತೋರ್ವ ಗಂಭೀರ (Mulur: Youth dies, another seriously injured in collision with unknown vehicle)

ಮೂಳೂರು : ಅಪರಿಚಿತ ವಾಹನ ಡಿಕ್ಕಿ, ಯುವಕ ಸಾವು ಮತ್ತೋರ್ವ ಗಂಭೀರ

(Mooluru) ಮೂಳೂರು: ಕಾಪು ಠಾಣಾ ವ್ಯಾಪ್ತಿಯ ಮೂಳೂರು ಮಿರ್ಚಿ ಹೋಟೇಲ್‌ ಎದುರು ರಾಹೆ 66 ರಲ್ಲಿ ಮಂಗಳವಾರ ತಡ ರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಒರ್ವ ಮೃತಪಟ್ಟರೆ ಮತ್ತೊರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಘಟಿಸಿದೆ.

  ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತ ಪ್ರಸಾದ್ರವರ ಮಗ ಪ್ರತೀಶ್(29) ಮೃತಪಟ್ಟಿದ್ದಾನೆ. ಸ್ಕೂಟಿ ಚಾಲನೆ ಮಾಡುತ್ತಿದ್ದ ಯುವಕ ನಿಹಾಲ್ ಸಲ್ದಾನ್(29) ಗಂಭೀರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

  ಪ್ರತೀಶ್ ಆಸ್ಪತ್ರೆ ಸೇರುವ ಮೊದಲೇ ಮೃತಪಟ್ಟಿದ್ದು, ನಿಹಾಲ್ ಸಾಲ್ದಾನ್ ಬೆನ್ನು ಮೂಳೆ ಸಹಿತ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾತ್ರಿ 1-30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಹೊತ್ತಲ್ಲದ ಹೊತ್ತಿನಲ್ಲಿಯೂ ಉಚ್ಚಿಲದ ಜಲಾಲುದ್ದೀನ್‌ ಮತ್ತವರ ತಂಡ ಘಟನಾ ಸ್ಥಳಕ್ಕೆ  ಧಾವಿಸಿ, ಎಸ್ಡಿಪಿಐ ಅಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

 ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಯಾವ ವಾಹನ ಡಿಕ್ಕಿಯಾಗಿದೆ ಎಂದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

Leave a comment

Your email address will not be published. Required fields are marked *

Emedia Advt3