# Tags
#ಸಂಘ, ಸಂಸ್ಥೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ಅಶಕ್ತ ಕಲಾವಿದನಿಗೆ ಧನಸಹಾಯ (Yakshadhruva Patla Foundation provides financial assistance to a disabled artist)

ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ಅಶಕ್ತ ಕಲಾವಿದನಿಗೆ ಧನಸಹಾಯ

(Mangaluru) ಮಂಗಳೂರು: ಕಳೆದ 35 ವರ್ಷಕ್ಕೂ ಮಿಕ್ಕಿ ಸಸಿಹಿತ್ಲು ಮೇಳ ಸೇರಿದಂತೆ ವಿವಿಧ ಮೇಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಾ ಅನಾರೋಗ್ಯಕ್ಕೊಳಗಾಗಿರುವ ಕಲಾವಿದ ನಾಗೇಶ್ ಆಚಾರ್ಯ ಕುಲಶೇಖರ ಇವರ ಮನೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಭೇಟಿ ನೀಡಿ ಆರೋಗ್ಯ, ಕ್ಷೇಮ ವಿಚಾರಿಸಿ ಫೌಂಡೇಶನ್‌ನ ವತಿಯಿಂದ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3