# Tags
#PROBLEMS

ಸುರತ್ಕಲ್: ನೀರಿನ ಸಮಸ್ಯೆಯ ವಿರುದ್ಧ ಸಾರ್ವಜನಿಕರ ಪ್ರತಿಭಟನೆ (Surathkal: Public protest against water problem)

ಸುರತ್ಕಲ್: ನೀರಿನ ಸಮಸ್ಯೆಯ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

(Surathkal) ಸುರತ್ಕಲ್: ಸುರತ್ಕಲ್ ಪರಿಸರದಲ್ಲಿ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ  ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಗೆ ಸಮಿತಿ ವತಿಯಿಂದ ಹಲವು ಬಾರಿ ಮನವಿಯನ್ನು ಸಲ್ಲಿಸಿಯೂ ಯಾವುದೇ ರೀತಿಯ ಸ್ಪಂದನೆ ಸಿಗದ ಕಾರಣ ಪಾಲಿಕೆ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

 ಈ ವೇಳೆ ಮಾತಾಡಿದ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಹುಸೇನ್ ಮಾತನಾಡಿ, ನೀರಿನ ಸಮಸ್ಯೆಯಿಂದಾಗಿ ಮೂರು ನಾಲ್ಕು ದಿನಗಳಿಂದ ಸ್ನಾನ ಮಾಡದೇ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ಇತ್ತಕಡೆ ತಿರುಗಿಯೂ ನೋಡುತ್ತಿಲ್ಲ. ಹೀಗಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ  ಎಂದರು.

5ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರಾದ ಶಂಶಾದ್ ಅಬೂಬಕ್ಕರ್ ಮಾತನಾಡಿ, ಸುರತ್ಕಲ್, ಚೊಕ್ಕಬೆಟ್ಟು, ಕೃಷ್ಣಾಪುರ, ಕಾಟಿಪಳ್ಳ ಪ್ರದೇಶವು ನೀರಿನ ಸಮಸ್ಯೆಯಿಂದ ತೀವ್ರ ತೊಂದರೆಗೊಳಗಾಗಿದೆ. ಅಧಿಕಾರಿಗಳಿಂದ ಭರವಸೆಯ ಮೇಲೆ ಬರವಸೆಗಳು ಮಾತ್ರ ದೊರೆಯುತ್ತಿದೆಯೇ ಹೊರತು ಯಾವುದೇ ರೀತಿಯ ಅಭಿವೃದ್ಧಿಯ ಪ್ರತಿಕ್ರಿಯೆ ದೊರಕುತ್ತಿಲ್ಲ ಎಂದರು.

ಉಪ ಅಯುಕ್ತೆ ವಾಣಿ ಆಳ್ವ ಹಾಗೂ ಅಭಿಯಂತರರು ಸ್ಥಳಕ್ಕೆ ಅಗಮಿಸಿದ್ದು, ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿದ್ದಂತೆ ಒಂದು ವಾರದ ಒಳಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮ. ನ. ಪಾ. ಕಚೇರಿಯ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆಯನ್ನು ಕೊಟ್ಟು ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.

ನೌಶಾದ್ ಚೊಕ್ಕಬೆಟ್ಟು, ಚೊಕ್ಕಬೆಟ್ಟು ನವಾಝ್ ಐನೈನ್, ಫಯಾಝ್ ಕೃಷ್ಣಾಪುರ, ನವಾಝ್ ಪಜ್ಜು, ಅಬ್ದುಲ್ ಜಬ್ಬಾರ್ ಕೃಷ್ಣಾಪುರ, ಅಬ್ದುಲ್ ಸಲಾಂ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3